ಉದ್ಯಾವರ: 8 ಬಸ್ಸು ನಿಲ್ದಾಣಗಳ ಶುಚಿತ್ವ -ಸ್ಯಾನಿಟೈಝ್

ಉಡುಪಿ, ಅ.2: ಗಾಂಧಿ ಜಯಂತಿ ಪ್ರಯುಕ್ತ ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಕಥೋಲಿಕ್ ಸಭಾ ಉದ್ಯಾವರ ಘಟಕ ಮತ್ತು ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿಯು ಜಂಟಿಯಾಗಿ ಇಂದು ಉದ್ಯಾವರದ 8 ಬಸ್ ನಿಲ್ದಾಣಗಳ ಶುಚಿತ್ವ ಮತ್ತು ಸ್ಯಾನಿಟೆಝೆಶನ್ ಕಾರ್ಯ ನಡೆಸಿತು.
ಉಡುಪಿ ಕ್ರೆಸ್ತ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸ್ಥಳೀಯ ದೇವಾಲಯದ ಪ್ರಧಾನ ಧರ್ಮಗುರು ಅತಿ ವಂ.ಸ್ಟ್ಯಾನಿ ಬಿ.ಲೋಬೊ, ಮಹಾತ್ಮ ಗಾಂಧಿಯ ವರಿಗೆ ನಮನ ಸಲ್ಲಿಸಿದರು. ಸಂತ ಫ್ರಾನ್ಸಿಸ್ ಜೇವಿಯರ್ ಕನ್ನಡ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿ ಸಿ.ವಿಲ್ಮಾ ಪಿಂಟೋ ಮಾತನಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ.ರೊಲ್ವಿನ್ ಅರಾನ್ಹ, ಕೆಥೋಲಿಕ್ ಸಭಾ ಉಡುಪಿ ವಲಯಾಧ್ಯಕ್ಷ ರೊನಾಲ್ಡ್ ಅಲ್ಮೇಡ, ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮೈಕಲ್ ಡಿಸೋಜ, ಐಸಿವೈಎಂ ಉದ್ಯಾವರ ಘಟಕಾಧ್ಯಕ್ಷ ರೊಯಲ್ ಕಸ್ತೆಲಿನೋ, ಸಲಹೆಗಾರರಾದ ಜೂಲಿಯ ಡಿಸೋಜ, ಪ್ರಮುಖರಾದ ಗಾಡ್ಪ್ರಿ ಡಿಸೋಜ, ರೋನಾಲ್ಡ್ ಡಿಸೋಜ, ಜುಡಿತ್ ಪಿರೆರಾ, ಪ್ರೆಸಿಲ್ಲಾ ಮಚಾದೋ ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಅಧ್ಯಕ್ಷ ಲಾರೆನ್ಸ್ ಡೇಸಾ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ ವಂದಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.







