ಸರಕಾರದ ಧಮನಾರಿ ನೀತಿಗಳನ್ನು ವಿರೋಧಿಸಿ ಕೆಆರ್‌ಎಸ್ ಪಕ್ಷದಿಂದ ಧರಣಿ

ಉಡುಪಿ, ಅ.2: ಕೇಂದ್ರ ಹಾಗೂ ರಾಜ್ಯ ಸರಕಾರದ ಧಮನಕಾರಿ ನೀತಿ ಗಳನ್ನು ವಿರೋಧಿಸಿ ಕೆಆರ್‌ಎಸ್ ಉಡುಪಿ ಘಟಕದ ವತಿಯಿಂದ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ಮಾತನಾಡಿ, ತಮ್ಮ ಕುಟುಂಬದ ಭ್ರಷ್ಟಚಾರವನ್ನು ಬಯಲಿ ಗೆಳೆದ ಖಾಸಗಿ ಸುದ್ದಿ ವಾಹಿನಿಯನ್ನೇ ಬಂದ್ ಮಾಡುವ ಮೂಲಕ ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಧಮನಕಾರಿ ನೀತಿಗಳನ್ನು ಪ್ರದಶಿರ್ಸುತ್ತಿದ್ದಾರೆ ಎಂದು ಆರೋಪಿಸಿದರು.
ಅತ್ಯಂತ ಹೆಚ್ಚು ದಲಿತರು, ಅಲ್ಪಸಂಖ್ಯಾತರ ಮೇಲೆ ಶೋಷಣೆ, ಅತ್ಯಾಚಾರ, ಅಪರಾಧ ಪ್ರಕರಣಗಳು ಉತ್ತರಪ್ರದೇಶದಲ್ಲಿ ನಡೆಯುತ್ತಿದೆ. ದಲಿತ ಯುವತಿಯ ಅತ್ಯಾಚಾರದ ಬಗ್ಗೆ ಪ್ರಧಾನಿ ಮೋದಿ ಈವರೆಗೆ ತುಟಿ ಬಿಚ್ಚಿ ಮಾತನಾಡಿಲ್ಲ. ಇಡೀ ದೇಶದ ಜನ ಹೊಟ್ಟೆಗೆ ಅನ್ನ ಇಲ್ಲದೆ ಪರದಾಡುತ್ತಿದ್ದರೆ ನಮ್ಮ ಪ್ರಧಾನಿ ನವಿಲಿಗೆ ತಿಂಡಿ ತಿನಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಮುಖಂಡರಾದ ರಾಮದಾಸ್ ಪೈ, ಸಫಾನ್ ಹಾಗೂ ಕಿರಣ್ ಕುಮಾರ್ ಪೆರ್ಡೂರು ಮಾತನಾಡಿದರು. ಪ್ರಸಾದ ಕರ್ಕಡ, ಇಕ್ಬಾಲ್, ಶ್ರೀನಿವಾಸ, ಪ್ರಿತೀಶ್, ಭರತ್, ವಿಲ್ಫ್ರೆಡ್ ಮೊದಲಾದವರು ಉಪಸ್ಥಿತರಿದ್ದರು. ವಿನುತಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು.







