ಯುವಕ ಆತ್ಮಹತ್ಯೆ
ಬ್ರಹ್ಮಾವರ, ಅ.2: ಮಾನಸಿಕ ಖಿನ್ನತೆಯಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.1ರಂದು ಸಂಜೆ ವೇಳೆ ಬೈಕಾಡಿಯ ಗಾಂಧಿನಗರ ಎಂಬಲ್ಲಿ ನಡೆದಿದೆ.
ಮೃತರನ್ನು ಬೈಕಾಡಿಯ ಚಂದ್ರಕಾಂತ ಶೆಟ್ಟಿಗಾರ ಎಂಬವರ ಮಗ ಅಕ್ಷಯ್ ಕುಮಾರ್(20) ಎಂದು ಗುರುತಿಸಲಾಗಿದೆ. ಬ್ರಹ್ಮಾವರ ಮಹೇಶ್ ಹಾರ್ಡವೇರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಕೋವಿಡ್ -19 ಕಾಯಿಲೆ ಕಾರಣದಿಂದ ಕಳೆದ 3 ತಿಂಗಳಿನಿಂದ ಕೆಲಸ ಬಿಟ್ಟು ವುನೆಯಲ್ಲಿಯೇ ಉಳಿದು ಕೊಂಡಿದ್ದರು.
ಇದರಿಂದ ಇತ್ತೀಚಿಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಕ್ಷಯ್, ಜೀವನ ದಲ್ಲಿ ಜಿಗುಪ್ಸೆಗೊಂಡು ಮನೆಯ ಮಲಗುವ ಕೋಣೆಯ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





