ಬೈಕ್ ಕಳವು ಪ್ರಕರಣ: ಆರೋಪಿ ಸೆರೆ

ಮಂಗಳೂರು, ಅ.2: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲಿ ಭಾಗಿಯಾದ ಎನ್ನಲಾದ ಆರೋಪಿಯನ್ನು ಮಂಗಳೂರು ಪೂರ್ವ (ಕದ್ರಿ) ಪೊಲೀಸರು ಬಂಧಿಸಿದ್ದಾರೆ.
ಪಂಜಿಮೊಗರು ಉರುಂದಾಡಿಗುಡ್ಡೆ ನಿವಾಸಿ ಚರಣ್‌ರಾಜ್ (20) ಬಂಧಿತ ಆರೋಪಿ. ಈತನಿಂದ 96 ಸಾವಿರ ರೂ. ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಚರಣ್ ರಾಜ್‌ನು ಸುಮಂತ್, ವಿಜಯ್ ಎಂಬವರೊಂದಿಗೆ ಸೇರಿಕೊಂಡು 2018ರಲ್ಲಿ ಬೈಕ್ ಮತ್ತು ಬೇರೆ ಬೇರೆ ದಿನಗಳಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಆರೋಪಿಗಳು ನಗರದ ಕುಂಟಿಕಾನ ಸಮೀಪದ ಖಾಸಗಿ ಆಸ್ಪತ್ರೆ, ಯೆಯ್ಯೆಡಿ ಸೇರಿದಂತೆ ವಿವಿಧೆಡೆಯಿಂದ ಸ್ಪ್ಲೆಂಡರ್ ಬೈಕ್‌ಗಳನ್ನು ಕಳ್ಳತನ ಮಾಡಿದ್ದರು. ಆರೋಪಿ ವಿಜಯ್ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ಪಣಂಬೂರು, ಕಾವೂರು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾರ್ಗದರ್ಶನದಂತೆ ಡಿಸಿಪಿಗಳಾದ ಅರುಣಾಂಶುಗಿರಿ, ವಿನಯ್ ಗಾಂವಕರ್ ನಿರ್ದೇಶನದಂತೆ ಎಸಿಪಿ ಎಂ. ಜಗದೀಶ್ ನೇತೃತ್ವದಲ್ಲಿ ಕದ್ರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸವಿತ್ರ ತೇಜ, ಪಿಎಸ್‌ಐ ಅನಿತಾ ನಿಕ್ಕಂ, ಪಿಎಸ್‌ಐ ಜ್ಞಾನಶೇಖರ, ಎಎಸ್‌ಐ ಶಶಿಧರ್ ಶೆಟ್ಟಿ ಮತ್ತು ಸಿಬ್ಬಂದಿ ಜಯಾನಂದ, ಉಮೇಶ್ ಕೊಟ್ಟಾರಿ, ರಾಘವೇಂದ್ರ, ನಾಗರಾಜ್ ಆರೋಪಿ ಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.







