ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ವಿರುದ್ಧ ಉಳ್ಳಾಲ ಕಾಂಗ್ರೆಸ್ ಪ್ರತಿಭಟನೆ

ಉಳ್ಳಾಲ : ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ಜಾರಿ ಮಾಡಿರುವ ವಿರುದ್ಧ ಪ್ರತಿಭಟನಾ ಜಾಥಾ ತೊಕ್ಕೊಟ್ಟುವಿನಲ್ಲಿ ಶುಕ್ರವಾರ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಖಾದರ್ ಅವರು , ಕೇಂದ್ರ ಸರ್ಕಾರ ನೂತನ ಎಪಿಎಂಸಿ ಕಾಯ್ದೆ ಹಾಗೂಹೊಸ ಯೋಜನೆ ಜಾರಿ ಮಾಡ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರ ದ ರೈತ ವಿರೋಧಿ ಧೋರಣೆ ಯಿಂದ ರೈತರು ಕಂಗಾಲಾಗಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಯವರ ಮೇಲೆ ಯುಪಿ ಸರ್ಕಾರ ಕೈಗೊಂಡಿರುವ ಕ್ರಮ ಖಂಡನೀಯವಾಗಿದೆ. ಸಂತ್ರಸ್ತೆಯ ಕುಟುಂಬ ವನ್ನು ಭೇಟಿ ಮಾಡುವ ಸಂದರ್ಭ ಯುಪಿ ಪೊಲೀಸರು ಬಂಧಿಸಿದ್ದು ಸರಿಯಲ್ಲ.ಈ ವಿಚಾರ ಯುಪಿ ಸರ್ಕಾರ ಬೇಷರತ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಕಾರ್ಯ ದರ್ಶಿ ರಹ್ಮಾನ್ ಕೊಣಾಜೆ, ಮಂಗಳೂರುತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಕಾಂಗ್ರೆಸ್ ಮುಖಂಡ ರಾದ ಮುಸ್ತಫಾ ಹರೇಕಳ, ಸುರೇಶ್ ಬಟ್ನಗರ, ದೇವಕಿ, ಎನ್ ಎಸ್ ಕರೀಂ, ರವೂಫ್ ದೇರಳಕಟ್ಟೆ, ಟಿ.ಎಸ್ ನಾಸೀರ್ ಸಾಮಣೀಗೆ, ನಿಸಾರ್ ಸಾಮಣಿಗೆ ,ನಝರ್ ಪಟ್ಟೋರಿ, ಉಸ್ಮಾನ್ ಕಲ್ಲಾಪು, ದಿನೇಶ್ ರೈ, ಸಪ್ನಾ ಹರೀಶ್, ಮುಹಮ್ಮದ್ ಅಸೈ, ಅಬ್ದುಲ್ ರಹಿಮಾನ್, ಅಚ್ಚುತಗಟ್ಟಿ, ಆಳ್ವಿನ್ ಡಿಸೋಜ, ದಿನೇಶ್ ಕುಂಪಲ, ಹರೀಶ್ ರಾವ್, ಸಿದ್ದೀಕ್, ಶ್ರೀ ನಿವಾಸ್, ಖಾದರ್ ತಲಪಾಡಿ, ಕುಂಞಿ ಮೋನು, ಇಸ್ಮಾಯಿಲ್ ,ಸೌಕತ್ ಅಲಿ, ಮನ್ಸೂರ್ ಉಳ್ಳಾಲ್, ಪುರುಷೋತ್ತಮ ಪಿಲಾರ್, ಪದ್ಮಾವತಿ ಪೂಜಾರಿ, ರವಿ ಕಾಪಿಕಾಡ್, ಶಶಿ ಪ್ರಭ, ಪದ್ಮನಾಭ ಗಟ್ಟಿ, ರಫೀಕ್, ಅರುಣ್, ನಾಗೇಶ್ ಶೆಟ್ಟಿ, ಬಶೀರ್ ಕೊಳಂಗರೆ ಮೊದಲಾದವರು ಉಪಸ್ಥಿತರಿದ್ದರು.







