ಮೂಡಬಿದ್ರೆ ; ದುಬೈ ಕಾರ್ ರೇಸ್ ನಲ್ಲಿ ಭಾರತಕ್ಕೆ ಪ್ರಶಸ್ತಿ : ಶುಹೈಬ್ ಅಲಿಗೆ ಎಸ್.ಡಿ.ಪಿ.ಐ. ಸನ್ಮಾನ

ಮೂಡಬಿದ್ರೆ : ಸೆಪ್ಟೆಂಬರ್ ತಿಂಗಳಲ್ಲಿ ದುಬೈ ಯಲ್ಲಿ ನಡೆದ "ಎಂಡ್ಯುರನ್ಸ್ ಚಾಂಪಿಯನ್ ಶಿಪ್ 2020" ಕಾರ್ ರೇಸ್ ನಲ್ಲಿ ಜರ್ಮನ್, ಜಪಾನ್, ಇಂಗ್ಲೆಂಡ್, ಪ್ರಾನ್ಸ್ ಸೇರಿದಂತೆ ಹಲವು ದೇಶಗಳನ್ನು ಸೋಲಿಸಿ ತೃತೀಯ ಸ್ಥಾನವನ್ನು ಗಿಟ್ಟಿಸಿದ ಭಾರತದ ತಂಡವನ್ನು ಪ್ರತಿನಿಧಿಸಿದ ಮೂಡಬಿದ್ರೆಯ ಶುಹೈಬ್ ಅಲಿಯನ್ನು ಮುಲ್ಕಿ ಮೂಡಬಿದ್ರೆ ಕ್ಷೇತ್ರ ಸಮಿತಿಯು ಇತ್ತೀಚೆಗೆ ಅವರನ್ನು ಸನ್ಮಾನಿಸಿತು.
ಶುಹೈಬ್ ಅಲಿ ಯವರು ಪ್ರಸಕ್ತ ಮೂಡಬಿದ್ರೆಯ ಕೋಟೆಬಾಗಿಲುನವರಾಗಿದ್ದು ಅಳ್ವಾಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.
ಶಹೈಬ್ ಅಲಿ ಅವರ ಸಾಧನೆಯು ಭಾರತದ ಕೀರ್ತಿಯನ್ನು ಅಂತರಾಷ್ರೀಯ ಮಟ್ಟದಲ್ಲಿ ಬೆಳಗಿಸಿದ್ದಾರೆ. ಇದನ್ನು ಮನಗಂಡು ಮುಲ್ಕಿ ಮೂಡಬಿದ್ರೆ ಕ್ಷೇತ್ರ ಸಮಿತಿ ಅದ್ಯಕ್ಷ ಆಸಿಫ್ ಕೋಟೆಬಾಗಿಲು ರವರು ಮುಂದಿನ ಭವಿಷ್ಯಕ್ಕೆ ಇನ್ನಷ್ಟು ಸಾಧನೆಗೈಯಲು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಎಸ್.ಡಿ.ಪಿ.ಐ ಮುಲ್ಕಿ ಮೂಡಬಿದ್ರೆ ಕ್ಷೇತ್ರ ಸಮಿತಿಯ ಇಬ್ರಾಹಿಂ ಹಂಡೇಲ್, ಮೂಡಬಿದ್ರೆ ವಲಯ ಸಮಿತಿಯ ಇಮ್ರಾನ್ ಲಾಡಿ, ಶಹ್ರಾಝ್, ರಿಯಾಝ್ ಹಂಡೇಲ್, ಅನ್ವರ್ ಕೋಟೆಬಾಗಿಲು, ಅಶ್ರಫ್ ಕೋಟೆಬಾಗಿಲು ಮತ್ತು ಶಂಶುದ್ದೀನ್ ಕರ್ನಿರೆ ಉಪಸ್ಥಿತರಿದ್ದರು.







