ಮಂಗಳೂರು: ‘ಮಹಾನ್ ತಾತ’ ಸಾಕ್ಷಚಿತ್ರ ಪ್ರದರ್ಶನಕ್ಕೆ ಚಾಲನೆ

ಮಂಗಳೂರು, ಅ.2: ಕರುನಾಡಿನ ಸಾಕ್ಷಿಪ್ರಜ್ಞೆ, ಸ್ವಾತಂತ್ರ್ಯ ಸೇನಾನಿ, ಜನಪರ ಹೋರಾಟಗಾರ 103 ವರ್ಷದ ಎಚ್.ಎಸ್. ದೊರೆಸ್ವಾಮಿ ಅವರ ಬದುಕು ಮತ್ತು ಸಂಘರ್ಷದ ಕುರಿತಾದ ‘ಪೆಡಸ್ಟೆರಿಯನ್ ಪಿಚ್ಚರ್ಸ್’ ನಿರ್ಮಾಣದ ಸಾಕ್ಷಚಿತ್ರ ‘ಮಹಾನ್ ತಾತ’ ರಾಜ್ಯದ ಹಲವೆಡೆ ಪ್ರದರ್ಶನಗೊಂಡಿದ್ದು, ಅದರಂತೆ ದ.ಕ. ಜಿಲ್ಲಾ ಸಹಮತ ವೇದಿಕೆಯು ನಗರದಲ್ಲಿ ಸಾಕ್ಷಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಂಡಿತು.
ನಗರದ ದಿ ಕ್ಯಾಂಪಸ್ ಕರಿಯರ್ ಅಕಾಡಮಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಮತ ವೇದಿಕೆಯ ಅಧ್ಯಕ್ಷ ಎಚ್.ಎಂ. ಸೋಮಶೇಖರಪ್ಪ ಸಾಕ್ಷಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಸಹಮತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್., ಅಬ್ದುಲ್ ಜಲೀಲ್ ಕೃಷ್ಣಾಪುರ, ನಂದಗೋಪಾಲ್ ಎಸ್., ಮೌಶಿರ್ ಅಹ್ಮದ್ ಸಾಮಣಿಗೆ, ಇಕ್ಬಾಲ್ ಬೆಳ್ಳಾರೆ, ಕಲ್ಲಚ್ಚು ಮಹೇಶ್ ಆರ್. ನಾಯಕ್, ಶಬ್ಬೀರ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.
Next Story





