ಮಂಚಿ ಸೆಕ್ಟರ್ ದಅವಾ ಮೀಟ್, ಬೇಕಲ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ

ಮಂಚಿ : ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ಮತ್ತು ಸೆಕ್ಟರ್ ದಅವಾ ಸಮಿತಿ ವತಿಯಿಂದ ದಅವಾ ಮೀಟ್ ಹಾಗೂ ಬೇಕಲ್ ಉಸ್ತಾದ್ ಅನುಸ್ಮರಣಾ ಸಂಗಮವು ಪಂಜಿಕ್ಕಲ್ ಮದ್ರಸದಲ್ಲಿ ಝುಬೈರ್ ಸಂಪಿಲ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಪಂಜಿಕ್ಕಲ್ ಜುಮಾ ಮಸೀದಿ ಖತೀಬ್ ಬಶೀರ್ ಹಿಮಮಿ ದುಆ ನಡೆಸಿ, ಮಂಚಿ ಸೆಕ್ಟರ್ ಮಾಜಿ ಅಧ್ಯಕ್ಷ ಅಬ್ಬಾಸ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುನ್ನೀ ಮಹಲ್ ಮುದರ್ರಿಸ್ ಸಾಲಿಂ ಸಅದಿ ಅಲ್ ಅಫ್ಳಲಿ ತರಗತಿ ನಡೆಸಿದರು.
ಅಸರ್ ನಮಾಝ್ ಬಳಿಕ ಶೈಖುನಾ ಬೇಕಲ್ ಉಸ್ತಾದ್ ಅವರ ಅನುಸ್ಮರಣಾ ಸಂಗಮವು ಅಸ್ಸೆಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಆಬಿದ್ ನಈಮೀ, ರಫೀಕ್ ಝುಹ್ರಿ, ಅಸ್ಲಂ ಸಂಪಿಲ, ರಿಯಾಝ್ ಬಾಹಸನಿ, ಇಬ್ರಾಹಿಂ ಸುರಿಬೈಲು, ಅಶ್ರಫ್ ಸಖಾಫಿ ಮೋಂತಿಮಾರ್, ಹುಸೈನ್ ಮುಈನೀ ಪಂಜಿಕ್ಕಲ್, ಸಮದ್ ಮುಸ್ಲಿಯಾರ್ ಕುಕ್ಕಾಜೆ,ಮಜೀದ್ ಪಂಜಿಕ್ಕಲ್ ಉಪಸ್ಥಿತರಿದ್ದರು.
ಸೆಕ್ಟರ್ ದಅವಾ ಸಮಿತಿ ಪ್ರ. ಕಾರ್ಯದರ್ಶಿ ಫಸೀಹ್ ಮಂಚಿ ಸ್ವಾಗತಿಸಿ, ಸೆಕ್ಟರ್ ಪ್ರ.ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ವಂದಿಸಿದರು.





