ಅಟಲ್ ಸುರಂಗ ಎಂದು ಹೇಳಿಕೊಂಡು ಕ್ಯಾಲಿಫೋರ್ನಿಯಾ ಸುರಂಗದ ಚಿತ್ರ ಪೋಸ್ಟ್ ಮಾಡಿದ ಬಿಜೆಪಿ ನಾಯಕರು

Photo: Twitter(@NarenderChawla1)
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಹಿಮಾಚಲ ಪ್ರದೇಶದಲ್ಲಿ ಉದ್ಘಾಟಿಸಿದ ಜಗತ್ತಿನ ಅತ್ಯಂತ ಉದ್ದದ ಅಟಲ್ ಸುರಂಗ ಎಂದು ಹೇಳಿಕೊಂಡು ಹಲವು ಬಿಜೆಪಿ ನಾಯಕರು ಇಂದು ಒಂದು ಸುರಂಗದ ಫೋಟೋ ಶೇರ್ ಮಾಡಿದ್ದಾರೆ. ಹೀಗೆ ಈ ಫೋಟೋ ಶೇರ್ ಮಾಡಿದವರಲ್ಲಿ ದಿಲ್ಲಿ ಬಿಜೆಪಿ ಅಧ್ಯಕ್ಷ ಅದೇಶ್ ಗುಪ್ತಾ, ಬಿಜೆಪಿ ಸದಸ್ಯ ನರೇಂದ್ರ ಕುಮಾರ್ ಚಾವ್ಲಾ, ಮಧ್ಯ ಪ್ರದೇಶ ಬಿಜೆಪಿ ವಕ್ತಾರ ನೀರು ಸಿಂಗ್ ಗ್ಯಾನಿ ಸೇರಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಟೈಮ್ಸ್ ನೌ, ಏಷ್ಯಾ ನೆಟ್ ನ್ಯೂಸ್ (ಬಾಂಗ್ಲಾ) ಕೂಡ ಇದೇ ಫೋಟೋ ಪ್ರಕಟಿಸಿದ್ದವು.
ಆದರೆ ವಾಸ್ತವವಾಗಿ ಇದು ಪ್ರಧಾನಿ ಉದ್ಘಾಟಿಸಿದ ಸುರಂಗ ಆಗಿರದೆ ಕ್ಯಾಲಿಫೋರ್ನಿಯಾದ ಟಾಮ್ ಲಂಟೋಸ್ ಸುರಂಗದ ಚಿತ್ರವಾಗಿತ್ತು. ಈ ಸುರಂಗವನ್ನು ‘ಡೆವಿಲ್ಸ್ ಸ್ಲೈಡ್ ಟನೆಲ್ಸ್’ ಎಂದೂ ಕರೆಯಲಾಗುತ್ತದೆ. ಈ ನಿರ್ದಿಷ್ಟ ಚಿತ್ರವನ್ನು ಎಂಟು ವರ್ಷಗಳ ಹಿಂದೆ ಕ್ಲಿಕ್ಕಿಸಲಾಗಿತ್ತು.
ಪ್ರಧಾನಿ ಮೋದಿ ಉದ್ಘಾಟಿಸಿದ ಅಟಲ್ ಸುರಂಗದ ಪ್ರವೇಶದ್ವಾರವನ್ನು ಶನಿವಾರ ಮೇಜರ್ ಜನರಲ್ ಗಗನ್ ದೀಪ್ ಬಕ್ಷಿ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಕಾಣಿಸುವಂತೆ ಅಟಲ್ ಸುರಂಗ ಪ್ರವೇಶದ ದ್ವಾರಕ್ಕೂ ಬಿಜೆಪಿ ನಾಯಕರು ಪೋಸ್ಟ್ ಮಾಡಿದ ಸುರಂಗದ ಪ್ರವೇಶದ್ವಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಟಲ್ ಸುರಂಗದ ಪ್ರವೇಶ ಆಯತಾಕಾರ ಹೊಂದಿದ್ದರೆ ಕ್ಯಾಲಿಫೋರ್ನಿಯಾದ ಸುರಂಗ ವೃತ್ತಾಕಾರ ಹೊಂದಿದೆ.

पीएम श्री @narendramodi जी को दुनिया की सबसे लंबी राजमार्ग सुरंग 'अटल सुरंग' के लिए बधाई। यह सुरंग देश की सीमाओं की रक्षा करने में महत्वपूर्ण भूमिका निभाएगी।मनाली व लेह के बीच की दूरी भी 4 से 5 घंटे कम हो जाएगी,अर्थव्यवस्था और पर्यटन क्षेत्र को बढ़ावा मिलेगा।#AtalTunnelRohtang pic.twitter.com/eBOzNGnlzY
— Narendra Kumar Chawla (@NarenderChawla1) October 3, 2020
The Atal tunnel has come at a most crtical juncture in the India - China face off.The need to move Large forces to eastern ladakh had more than doubled the Winter stocking requirement. Atal Tunnell Provides a paradigm Shift in Op- logistics. It could not have been better timed . pic.twitter.com/mbAZXeHaLy
— Maj Gen (Dr)GD Bakshi SM,VSM(retd) (@GeneralBakshi) October 3, 2020







