ಪೆಟ್ರೋಲ್ ಬಂಕ್ ಗಳಲ್ಲಿ ಸುಲಿಗೆ ಪ್ರಕರಣ: ಮೂವರ ಬಂಧನ

ಮಂಗಳೂರು, ಅ. 3: ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯ ವಿವಿಧೆಡೆ ಪೆಟ್ರೋಲ್ ಬಂಕ್‌ಗಳಿಂದ ಕಳವು ಮತ್ತು ಸುಲಿಗೆ ಕೃತ್ಯ ಎಸಗುತ್ತಿದ್ದ ಆರೋಪದಲ್ಲಿ ಮೂವರನ್ನು ಕಂಕನಾಡಿ ನಗರ ಠಾಣೆ ಹಾಗೂ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆದಿದೆ.
ಕೆ.ಸಿ.ರೋಡ್ ನಿವಾಸಿ ಮುಹಮ್ಮದ್ ಸುಹೈಲ್ (19), ತಲಪಾಡಿ ಕೆ.ಸಿ. ನಗರ ನಿವಾಸಿಗಳಾದ ಆಶೀಕ್ ಯಾನೆ ಅಹ್ಮದ್ ಆಶಿಕ್ (19), ಫಳ್ನೀರ್ ರಸ್ತೆ ಮಹಾರಾಜ ಹೈಟ್ಸ್ ಅಪಾರ್ಟ್‌ಮೆಂಟ್ ನಿವಾಸಿ ಮಹಮ್ಮದ್ ಅರ್ಫಾನ್ (20) ಬಂಧಿತ ಆರೋಪಿಗಳು. ಕೃತ್ಯಕ್ಕೆ ಉಪಯೋಗಿಸಿದ ಮಾರಕಾಯುಧಗಳು, ಧರಿಸಿದ ಹೆಲ್ಮೆಟ್, ಬೈಕ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಂಜಿತ್‌ಕುಮಾರ್ ಬಂಡಾರು ನಿರ್ದೇಶನದಲ್ಲಿ ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್ ಅಶೋಕ್ ಪಿ. ನೇತೃತ್ವದಲ್ಲಿ ಪಿಎಸ್‌ಐಗಳಾದ ಸುಂದರ್ ರಾಜ್, ರಘು ನಾಯಕ್, ಪೂರ್ಣಿಮಾ, ವಿಶೇಷ ತಂಡದ ದಯಾನಂದ ಎಚ್., ಮುಹಮ್ಮದ್ ಶರೀಫ್, ಮುಹಮ್ಮದ್ ಇಕ್ಬಾಲ್, ಮಹೇಶ್ ಹಾಗು ಕಂಕನಾಡಿ ಠಾಣಾ ಎಎಸ್‌ಐ ಜಗದೀಶ್, ರವೀಂದ್ರ ನಾಥ್ ರೈ, ಅಪರಾಧ ವಿಭಾಗದ ಸಿಬ್ಬಂದಿ ಸಂತೋಷ್, ವಿನೋದ್ ಕುಮಾರ್, ಮದನ್, ಕೆ.ಎನ್.ರಾಜೇಶ್, ಮೇಘರಾಜ್, ಕಾರ್ತಿಕ್, ಜೀವನ್ ನಾಯ್ಕಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.







