ಹತ್ರಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ : ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮಂಗಳೂರು, ಅ.3: ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಅಂಬೇಡ್ಕರ್‌ವಾದ) ನಗರದ ಮಿನಿವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಯಿತು.
ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ, ಜಿಲ್ಲಾ ಸಂಘಟನಾ ಸಂಚಾಲಕರಾದ ಸದಾಶಿವ ಉರ್ವ ಸ್ಟೋರ್, ನಾಗೇಶ್ ಮುಲ್ಲಕಾಡು, ಮಂಗಳೂರು ತಾಲೂಕು ಸಂಚಾಲಕ ಕೆ.ಚಂದ್ರ, ತಾಲೂಕು ಸಂಘಟನಾ ಸಂಚಾಲಕರಾದ ಸುನೀಲ್ ಕುಮಾರ್ ಅದ್ಯಪಾಡಿ ಬಜ್ಪೆ, ಭಾಸ್ಕರ್ ಬಲ್ಮಠ, ಸುಂದರ್ ಬಲ್ಲಾಳ್‌ಬಾಗ್, ಎಂಸಿಸಿ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಪದ್ಬನಾಭ, ದಲಿತ ಮುಖಂಡ ಯೋಗೀಶ್, ಮಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶನ ಮಾಜಿ ಸದಸ್ಯ ಪ್ರೇಮನಾಥ್ ಬಲ್ಲಾಳ್‌ಬಾಗ್, ದಸಂಸ ಮಂಗಳೂರು ತಾಲೂಕು ಸಂಘಟನಾ ಸಂಚಾಲಕ ರಾಮು ಮೂಡುಶೆಡ್ಡೆ, ದಲಿತ ಮುಖಂಡರಾದ ಸೆಲ್ವರಾಜ್, ವೀರಮುತ್ತು, ನಿತ್ಯಾನಂದ ಉರ್ವಸ್ಟೋರ್ ಮುಂತಾದವರು ಭಾಗವಹಿಸಿದ್ದರು.
Next Story





