ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಗಾಂಧಿ ಜಯಂತಿ, ಉಪನ್ಯಾಸ ಕಾರ್ಯಕ್ರಮ

ಮಂಗಳೂರು, ಅ. 3: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬ್ಯಾರೀಸ್ ಎನ್ವಿರೊ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ಹಾಗೂ ಬಿಐಟಿ ಪಾಲಿಟೆಕ್ನಿಕ್ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಭಾರತದ ಕುರಿತು ಮಹಾತ್ಮಾ ಗಾಂಧಿ ಅವರ ದೃಷ್ಟಿಕೋನದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿತ್ತು.
ಕಾರ್ಯಕ್ರಮದಲ್ಲಿ ಪ್ರೇರಣಾ ಬಾಷಣಕಾರ ಹಾಗೂ ಮಂಗಳೂರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಮಾಜಿ ಸಲಹೆಗಾರ ರಫೀಕ್ ಮಾಸ್ಟರ್ ಅತಿಥಿ ಹಾಗೂ ಉಪನ್ಯಾಸಕರಾಗಿ ಪಾಲ್ಗೊಂಡರು.
ಭಾರತದ ಕುರಿತು ಮಹಾತ್ಮಾ ಗಾಂಧಿ ಅವರ ದೃಷ್ಟಿಕೋನದ ಬಗ್ಗೆ ಮಾತನಾಡಿದ ರಫೀಕ್ ಮಾಸ್ಟರ್, ಮಹಾತ್ಮಾ ಗಾಂಧಿ ಅವರು ಭಾರತ ಹಿಂದೂ, ಮುಸ್ಲಿಂ ಹಾಗು ಕ್ರಿಶ್ಚಿಯನ್‌ರನ್ನು ಸಮಾನವಾಗಿ ಗೌರವಿಸುವ ದೇಶ ಎಂಬ ದೃಷ್ಟಿಕೋನ ಹೊಂದಿದ್ದರು ಎಂದರು.
ಬಿಐಟಿ ಪಾಲಿಟೆಕ್ನಿಕ್‌ನ ಡಾ. ಅಝೀಝ್ ಮುಸ್ತಫಾ, ಬಿಇಎಡಿಎಸ್‌ನ ಪ್ರಾಂಶುಪಾಲ ಅಶೋಕ್ ಮೆಂಡೋನ್ಸಾ ಮೊದಲಾದವರು ಉಪಸ್ಥಿತರಿದ್ದರು.
ಬಿಐಟಿಯ ಪ್ರಾಂಶುಪಾಲ ಡಾ. ಎಸ್.ಐ. ಮಂಜೂರ್ ಬಾಷಾ ಸ್ವಾಗತಿಸಿದರು.
Next Story









