ಜಯಪುರ : ಬೇಕಲ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ

ಕೊಪ್ಪ : ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ಜಯಪುರ ಘಟಕ ವತಿಯಿಂದ ಬೇಕಲ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮವು ಜಯಪುರ ಬದ್ರಿಯಾ ಜುಮಾ ಮಸೀದಿಯಲ್ಲಿ ಶನಿವಾರ ಮಗ್ರಿಬ್ ನಮಾಝ್ ಬಳಿಕ ವಾಗ್ಮಿ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ನೇತೃತ್ವದಲ್ಲಿ ನಡೆಯಿತು.
ಜಯಪುರ ಬದ್ರಿಯಾ ಜುಮಾ ಮಸೀದಿ ಸದರ್ ಉಸ್ತಾದ್ ಖಲೀಲ್ ಝಹ್ರಿ ಸ್ವಾಗತ ಮಾಡಿದರು. ಈ ಸಂದರ್ಭ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ, ಬೇಕಲ್ ಉಸ್ತಾದರ ಸ್ಮರಣಾ ಸಭೆಯನ್ನು ಇಷ್ಟು ಬೇಗ ನಾವು ಮಾಡಬೇಕಾಗಿ ಬಂದದ್ದು ಬಹಳ ದುಃಖದ ವಿಚಾರ ಎಂದು ಹೇಳಿದರು. ಉಸ್ತಾದರಿಗೆ ಕರ್ಮ ಶಾಸ್ತ್ರದಲ್ಲಿ, ಪಿಕ್ಹ್ ಶಾಸ್ತ್ರದಲ್ಲಿನ ಪಾಂಡಿತ್ಯ ಮಾತ್ರವಲ್ಲದೇ ಪ್ರವಾದಿಯ ಹಾದಿಯ ವೈದ್ಯಕೀಯ ಶಾಸ್ತ್ರದಲ್ಲೂ ಅಪಾರ ಜ್ಞಾನವನ್ನು ಹೊಂದಿದ್ದರು. ಅಲ್ಲದೇ ಸಮುದಾಯಕ್ಕಾಗುವ ಅನ್ಯಾಯ, ಅನೀತಿಯ ವಿರುದ್ಧ ಧ್ವನಿ ಎತ್ತುವಲ್ಲಿ ಅವರು ಮುಂಚೂಣಿ ವಹಿಸುತ್ತಿದ್ದರು ಎಂದು ಹೇಳಿದರು.
ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಜಮಾಅತ್ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.
Next Story







.jpeg)

