ನಂದಾವರ: ಬೇಕಲ್ ಉಸ್ತಾದ್ ಸ್ಮರಣಾರ್ಥ ಪ್ರಾರ್ಥನಾ ದಿನ

ಬಂಟ್ವಾಳ: ಎಸ್‌ವೈಎಸ್ ರಾಜ್ಯ ಸಮಿತಿಯ ನಿರ್ದೇಶದಂತೆ ತಾಜುಲ್ ಫುಖಹಾ ಬೇಕಲ್ ಉಸ್ತಾದರ ಹೆಸರಲ್ಲಿ ಪ್ರಾರ್ಥನಾ ಮಜ್ಲಿಸ್ ಅ.2ರಂದು ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ನಂದಾವರ ಸಮಿತಿ ವತಿಯಿಂದ ನಂದಾವರದಲ್ಲಿ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಆಲಡ್ಕ ಮುದರ್ರಿಸ್ ಅಶ್ರಫ್ ಸಖಾಫಿ ಅನುಸ್ಮರಣಾ ಭಾಷಣ ಮಾಡಿದರು. ಎಸ್‌ವೈಎಸ್ ನಾಯಕರಾದ ಸಲಾಂ ಸಅದಿ, ಅಬ್ದುಲ್ಲಾ ಕೊಳಕೆ, ಅಬ್ದುರ್ರಹ್ಮಾನ್ ಮದನಿ, ಹಸನ್ ಮದನಿ, ಹಮೀದ್ ದಾಸರಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಖತಮುಲ್ ಕುರ್ಆನ್, ತಹ್ಲೀಲ್ ಸಮರ್ಪಣೆ ನಡೆಯಿತು.

Next Story





