ಉಡುಪಿ: ಮಾಸ್ಕ್ ಧರಿಸದವರಿಂದ 60,300ರೂ. ದಂಡ ವಸೂಲಿ
ಉಡುಪಿ, ಅ.4: ಉಡುಪಿ ಜಿಲ್ಲೆಯಾದ್ಯಂತ ಅ.3ರಂದು ಮಾಸ್ಕ್ ಧರಿಸದವರಿಂದ ಒಟ್ಟು 60,300ರೂ. ದಂಡ ವಸೂಲಿ ಮಾಡಲಾಗಿದೆ. ನಗರ ಪ್ರದೇಶದಲ್ಲಿ 600ರೂ., ಗ್ರಾಮಾಂತರ ಪ್ರದೇಶದಲ್ಲಿ 2100ರೂ., ಪೊಲೀಸ್ ಇಲಾಖೆಯಿಂದ 55,300ರೂ., ಅಬಕಾರಿ ಇಲಾಖೆಯಿಂದ 1200ರೂ., ಕಂದಾಯ ಇಲಾಖೆಯಿಂದ 1100ರೂ. ದಂಡ ಸಂಗ್ರಹಿಸಲಾಗಿದೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 9,21,700 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





