ಬಹುಭಾಷಾ ಸಾಹಿತಿ ಕ್ಯಾಥರಿನ್ ರೊಡ್ರಿಗಸ್‌ಗೆ ಸನ್ಮಾನ

ಕಾಪು, ಅ.4: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಾಪು ತಾಲೂಕು ಕಸಾಪ ಸಹಭಾಗಿತ್ವದಲ್ಲಿ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಡಿಯಲ್ಲಿ ರವಿವಾರ ಸಂಜೆ ಬಹುಭಾಷಾ ಸಾಹಿತಿ, ಕವಯತ್ರಿ ಕಟಪಾಡಿ ಕ್ಯಾಥರಿನ್ ರೊಡ್ರಿಗಸ್ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಕ್ಯಾಥರಿನ್‌ರನ್ನು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸ್ಮರಣಿಕೆ, ಸನ್ಮಾನಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಶಿರ್ವ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಾಪು ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿಗಳಾದ ವಿದ್ಯಾಧರ್ ಪುರಾಣಿಕ್, ವಿದ್ಯಾ ಅಮ್ಮಣ್ಣಾಯ, ಸದಸ್ಯೆ ಸುದಕ್ಷಿಣೆ ಉಪಸ್ಥಿತರಿದ್ದರು. ಬಳಿಕ ಬಹುಬಾಷಾ ಸಾಹಿತಿಯೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
Next Story





