ವಾರ್ನರ್ ಅರ್ಧಶತಕ ವ್ಯರ್ಥ: ಮುಂಬೈ ವಿರುದ್ಧ ಹೈದರಾಬಾದ್ ಗೆ ಸೋಲು

ಶಾರ್ಜಾ: ಐಪಿಎಲ್‌ನ 16ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 34 ರನ್‌ನಿಂದ ಸೋಲುಂಡಿದೆ. ಇದು ಟೂರ್ನಿಯಲ್ಲಿ ವಾರ್ನರ್ ಬಳಗದ ಮೂರನೇ ಸೋಲಾಗಿದೆ.
ಗೆಲ್ಲಲು 209 ಗುರಿ ಪಡೆದ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ನಾಯಕ ಡೇವಿಡ್ ವಾರ್ನರ್ 44 ಎಸೆತಗಳಲ್ಲಿ 60, ಮನೀಶ್ ಪಾಂಡೆ 44 ಎಸೆತಗಳಲ್ಲಿ 30, ಬೈರ್ ಸ್ಟೋ 25, ಅಬ್ದುಲ್ ಸಮದ್ 20 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು.
Next Story





