ಬಂಧಿತ ಆರೋಪಿಗಳು ಹೇಳುವಷ್ಟು ತಪ್ಪಿತಸ್ಥರಲ್ಲ: ಹತ್ರಸ್ ಪ್ರಕರಣದ ಬಗ್ಗೆ ಬಿಜೆಪಿ ಮುಖಂಡನ ಹೇಳಿಕೆ

ಲಕ್ನೊ, ಅ.4: ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಂಧಿತ ಆರೋಪಿಗಳು ಹೇಳಲಾಗಿರುವಷ್ಟು ತಪ್ಪಿತಸ್ಥರಲ್ಲ ಎಂದು ಬಿಜೆಪಿಯ ಮುಖಂಡ, ಉತ್ತರಪ್ರದೇಶದ ಮಾಜಿ ಶಾಸಕ ರಾಜ್‌ವೀರ್ ಪಹಲ್ವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಜ್‌ವೀರ್ ರವಿವಾರ ಹತ್ರಸ್ ನ ತಮ್ಮ ನಿವಾಸದಲ್ಲಿ ಮೇಲ್ವರ್ಗದ ಸದಸ್ಯರ ಮಹಾಪಂಚಾಯತ್ ಸಭೆ ಕರೆದಿದ್ದರು. ಸಭೆಯಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವ ಸರಕಾರದ ಕ್ರಮ ಸ್ವಾಗತಾರ್ಹವಾಗಿದೆ. ಇದು ಪ್ರಕರಣದ ಸತ್ಯಾಂಶವನ್ನು ಬಯಲು ಮಾಡಲಿದೆ ಎಂದು ಹೇಳಿದರು. ಮಂಪರು ಪರೀಕ್ಷೆಗೆ ನಿರಾಕರಿಸಿರುವ ಸಂತ್ರಸ್ತೆಯ ಕುಟುಂಬ ಸದಸ್ಯರ ನಿರ್ಧಾರದ ಬಗ್ಗೆ ಸಭೆಯಲ್ಲಿ ಪಾಲ್ಗೊಂಡವರು ಸಂದೇಹ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ಪ್ರಕರಣದ ತನಿಖೆಗೆ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ದಳವನ್ನು ಭೇಟಿಯಾಗುವುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿಗಳು ಹೇಳಿದ್ದಾರೆ.
Next Story





