ಅತ್ಯಾಚಾರ ಪ್ರಕರಣ; ಉತ್ತರಪ್ರದೇಶ ಬಿಜೆಪಿ ಯುವ ಮೋರ್ಚಾ ಮುಖಂಡನ ಬಂಧನ

ಲಕ್ನೊ, ಅ. 4: ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ದಾಖಲಾದ ಬಳಿಕ ತಲೆ ಮರೆಸಿಕೊಂಡಿದ್ದ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಶ್ಯಾಮ್ ಪ್ರಕಾಶ್ ದ್ವಿವೇದಿಯನ್ನು ಪ್ರಯಾಗರಾಜ್ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಕಾಶಿ ಪಂತ್ ಅಥವಾ ವಾರಾಣಸಿ ಘಟಕದ ಮುಖಂಡನನ್ನು ಬಕ್ಷಿ ಡ್ಯಾಮ್ ಬಳಿ ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಅನಿಲ್ ದ್ವಿವೇದಿಯನ್ನು ಈಗಾಗಲೇ ಬಂಧಿಸಲಾಗಿದೆ.
ಪಿಸ್ತೂಲ್ ಹಿಡಿದು ಬೆದರಿಸಿ ನನ್ನ ಮೇಲೆ ಶ್ಯಾಮ್ ಪ್ರಕಾಶ್ ಹಾಗೂ ಅನಿಲ್ ದ್ವಿವೇದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಬಿಎ ವಿದ್ಯಾರ್ಥಿನಿ ಆರೋಪಿಸಿದ್ದರು. ಆರೋಪಿಯು ನನ್ನನ್ನು ಹೊಟೇಲ್ ಗೆ ಕರೆದೊಯ್ದು ತನ್ನ ಸ್ನೇಹಿತನ ಜೊತೆಗೂಡಿ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತೆ ಯುವತಿ ಆರೋಪಿಸಿದ್ದರು.
Next Story





