ಶೂಟರ್ ಶ್ರೇಯಸಿ ಬಿಜೆಪಿಗೆ ಸೇರ್ಪಡೆ

ಹೊಸದಿಲ್ಲಿ, ಅ.4: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಮಾಜಿ ಕೇಂದ್ರ ಸಚಿವ ದಿವಂಗತ ದಿಗ್ವಿಜಯ ಸಿಂಗ್ ಪುತ್ರಿ ಶೂಟರ್ ಶ್ರೇಯಸಿ ಸಿಂಗ್ ರವಿವಾರ ಪಕ್ಷದ ಮುಖಂಡ ಭೂಪೇಂದರ್ ಯಾದವ್ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನುಸೇರ್ಪಡೆಯಾದರು.
ನನ್ನನ್ನು ಅಗಲಿರುವ ತಂದೆ ದಿಗ್ವಿಜಯ್ ಸಿಂಗ್ ಅವರ ಕನಸನ್ನು ನನಸು ಮಾಡುವ ಪ್ರಮುಖ ಉದ್ದೇಶದಿಂದ ನಾನು ಬಿಜೆಪಿಗೆ ಸೇರಿದ್ದೇನೆ ಎಂದು ಶ್ರೇಯಸಿ ಸಿಂಗ್ ಹೇಳಿದ್ದಾರೆ.
ನನ್ನ ತಾಯಿ ಹಾಗೂ ಹಿರಿಯ ಸಹೋದರಿಯ ಆಶ್ರೀರ್ವಾದದೊಂದಿಗೆ ಬಿಜೆಪಿಯ ಸದಸ್ವತ್ವವನ್ನು ಸ್ವೀಕರಿಸಿದ್ದೇನೆ. ನನ್ನ ತಂದೆಯ ಕನಸು ಈಡೇರಿಸುವುದೇ ನನ್ನ ಮುಖ್ಯ ಗುರಿ ಎಂದು ಶ್ರೇಯಸಿ ಹೇಳಿದರು.
Next Story





