ಜಿಂಕೆ ಬೇಟೆಗೆ ಬಂದಿದ್ದ ಆರೋಪ: ಆರು ಮಂದಿ ಬಂಧನ

ತುಮಕೂರು, ಅ.4: ಕಾಡಿನಲ್ಲಿ ಜಿಂಕೆಯನ್ನು ಬೇಟೆಯಾಡುವ ಉದ್ದೇಶದಿಂದ ಡಬಲ್ ಬ್ಯಾರಲ್ ಗನ್ ಹಿಡಿದು, ಮೊಬೈಲ್ ಟಾರ್ಚ್ ಬೆಳಕು ಹಾಕಿಕೊಂಡು ಓಡಾಡುತ್ತಿದ್ದ ಆರು ಜನರನ್ನು ಬಂಧಿಸಿರುವ ಪಟ್ಟನಾಯಕನಹಳ್ಳಿ ಪೊಲೀಸರು, ಬಂಧಿತರಿಂದ ಮೊಬೈಲ್, ಬಂದೂಕು, ಗುಂಡುಗಳು ಹಾಗೂ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ
ಪಟ್ಟನಾಯಕನಹಳ್ಳಿ ಸಮೀಪದ ಅಜ್ಜಿ ಹಳ್ಳಿಯ ಸುತ್ತಮುತ್ತಲ ಕೆಲವರು ಮೊಬೈಲ್ ಟಾರ್ಚ್ ಬೆಳಕು ಹಿಡಿದು ಓಡಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನವೀನ್(25), ರೆಹಾನ್, ಶುಜಾತ್(23), ಕಿರಣ್(21), ಶ್ರೀಧರ್ (36), ರಾಜೀವ್ (23) ಎಂಬವರು ಸಿಕ್ಕಿಬಿದ್ದಿದ್ದು, ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಾಡಿನಲ್ಲಿ ಜಿಂಕೆ ಬೇಟೆಯಾಡಲು ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪಟ್ಟನಾಯಕನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.
Next Story





