ಒಂದು ವರ್ಷದ ಮಾಧ್ಯಮ ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನ
ಬೆಂಗಳೂರು, ಅ. 4: ಬದುಕು ಕಮ್ಯೂನಿಟಿ ಕಾಲೇಜು ವತಿಯಿಂದ ಪತ್ರಿಕೋದ್ಯಮದ ಮೌಲ್ಯಗಳ ಜತೆಗೆ ಮಾಧ್ಯಮವನ್ನು ಸಣ್ಣ ಉದ್ಯಮವಾಗಿ ಆರಂಭಿಸಬೇಕೆಂಬ ಆಕಾಂಕ್ಷೆಯನ್ನು ಹೊಂದಿರುವವರಿಗೆ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗಿದೆ.
ಕೋರ್ಸ್ ನ ವಿಶೇಷತೆಗಳು: ಮೊಬೈಲ್ ಜರ್ನಲಿಸಂ, ವೆಬ್‍ಡಿಸೈನ್ ಮತ್ತು ಡಿಜಿಟಲ್ ಮಾಧ್ಯಮ ಬಳಕೆ ಮತ್ತು ಕಲಿಕೆ. ವೆಬ್‍ಸೈಟ್, ಯೂಟ್ಯೂಬ್, ಫೇಸ್‍ಬುಕ್ ಮುಂತಾದವುಗಳ ಸಂಪೂರ್ಣ ಕಾರ್ಯನಿರ್ವಹಣೆಯ ಕಲಿಕೆ ಇರಲಿದೆ. ಇಂಗ್ಲಿಷ್ ಭಾಷೆ, ಭಾಷಾಂತರ ಕಲೆ, ವರದಿಗಾರಿಕೆ, ಬರವಣಿಗೆ ಮುಂತಾದ ಕೌಶಲ್ಯಗಳ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಆದ್ಯತೆ ವಹಿಸಲಾಗಿದೆ.
ವಿಡಿಯೋ ಎಡಿಟಿಂಗ್, ಕ್ಯಾಮೆರಾ, ಮುದ್ರಣ ವಿನ್ಯಾಸ ಮುಂತಾದ ತಂತ್ರಜ್ಞಾನ ಕೌಶಲ್ಯ, ತಾತ್ವಿಕ ವಿಚಾರಗಳ ಕಲಿಕೆ, ಮಾಧ್ಯಮ ಕೌಶಲ್ಯಗಳ ಅಭ್ಯಾಸ ಮತ್ತು ಜೀವನ ಕೌಶಲ್ಯಗಳ ಕಲಿಕೆಯನ್ನು ವಿಶಿಷ್ಟವಾಗಿ ಹೇಳಿಕೊಡಲಾಗುತ್ತದೆ. ಆಸಕ್ತರು ಬದುಕು ಕಮ್ಯೂನಿಟಿ ಕಾಲೇಜು, #136/7, 2ನೇ ಅಡ್ಡರಸ್ತೆ, ಎಲಿಫ್ಯಾಂಟ್ ಲೈಬ್ರರಿ ಹಿಂಬಾಗ. ಜಯನಗರ 3ನೇಬ್ಲಾಕ್ ಬೆಂ.11. ಹಾಗೂ ದೂ.99163-76954, 99450-65060ಗೆ ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.





