ರಸ್ತೆ ಅಪಘಾತ: ಅಫ್ಘಾನ್ ಕ್ರಿಕೆಟಿಗ ಚಿಂತಾಜನಕ

ಫೋಟೊ ಕೃಪೆ: facebook
ಕಾಬೂಲ್,ಅ.4 ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಆಘಾತವುಂಟು ಮಾಡಿರುವ ಇನ್ನೊಂದು ಘಟನೆಯಲ್ಲಿ ಅಫ್ಘಾನ್ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ನಜೀಬ್ ತಾರಕಾಯ್ ಅವರು ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.
ತಾರಕಾಯ್ ಅವರು ನಂಗರ್ಹಾರ್ನಲ್ಲಿ ರಸ್ತೆ ದಾಟುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ. 24 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿರುವ ತಾರಕಾಯ್ ಅವರು ಈವರೆಗೆ ಒಟ್ಟು 2030 ರನ್ಗಳನ್ನು ಗಳಿಸಿದ್ದಾರೆ.
Next Story





