Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ5 Oct 2020 12:10 AM IST
share
ಓ ಮೆಣಸೇ...

    ಜಸ್ವಂತ್ ಸಿಂಗ್ ಶ್ರದ್ಧೆಯಿಂದ ದೇಶ ಸೇವೆ ಮಾಡಿದವರು - ನರೇಂದ್ರ ಮೋದಿ, ಪ್ರಧಾನಿ
ಆ ಕಾರಣದಿಂದ ಅವರನ್ನು ನೀವು ದೂರ ಇಟ್ಟಿರಬೇಕು.


ಶಿವಸೇನೆ ಜೊತೆ ಮತ್ತೆ ಕೈ ಜೋಡಿಸುವುದಿಲ್ಲ - ದೇವೇಂದ್ರ ಫಡ್ನ್ನವೀಸ್, ಬಿಜೆಪಿ ನಾಯಕ
ಕಾಲು ಜೋಡಿಸುವ ಉದ್ದೇಶವೇನಾದರೂ ಇದೆಯೇ?


ತಳಮಟ್ಟದಿಂದ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ನಾಯಕರಾಗಿ ಸ್ಥಾನಮಾನ ಪಡೆಯಲು ಸಾಧ್ಯ - ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಕಾಂಗ್ರೆಸ್‌ನೊಳಗೆ ಕುರ್ಚಿಗೆ ಅಂಟಿಕೊಂಡಿರುವ ಮುದುಕರು ನಿವೃತ್ತರಾಗಿ ಜಾಗ ಖಾಲಿ ಮಾಡಿಕೊಡುವುದೂ ಅಷ್ಟೇ ಅಗತ್ಯವಿದೆ.


ಸಚಿವ ಸಂಪುಟ ವಿಸ್ತರಣೆಗೆ ಶೀಘ್ರವೇ ಮುಹೂರ್ತ ನಿಗದಿ -ಯಡಿಯೂರಪ್ಪ, ಮುಖ್ಯಮಂತ್ರಿ
ಇಲ್ಲವಾದರೆ ನಿಮ್ಮ ಸ್ಥಾನ ಪಲ್ಲಟಕ್ಕೆ ಮುಹೂರ್ತ ನಿಗದಿಯಾಗುವ ಸಾಧ್ಯತೆಗಳಿವೆ.


ರೈತ ಶಕ್ತಿಶಾಲಿ ಆಗಬೇಕೆಂಬ ಉದ್ದೇಶದಿಂದ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ - ಆರ್.ಅಶೋಕ್, ಸಚಿವ
ಬೀದಿಯಲ್ಲಿ ಆತ ನಡೆಸುತ್ತಿರುವ ಪ್ರತಿಭಟನೆಯಿಂದ, ಆತನೆಷ್ಟು ಶಕ್ತಿಶಾಲಿ ಎನ್ನುವುದು ನಿಮಗೆ ಮನವರಿಕೆಯಾಗಿರಬಹುದು.


ಕೋವಿಡ್ ಸೋಂಕಿಗೆ ಒಳಗಾದರೆ ಪ.ಬಂ.ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುವೆ - ಅನುಪಮ್ ಹಝ್ರ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
ಇಂತಹ ಬೇಜವಾಬ್ದಾರಿ ಮಾತಿಗೆ ರೋಸಿ ಕೊರೋನವೇ ಈಗ ನಿಮ್ಮನ್ನು ತಬ್ಬಿಕೊಂಡಿದೆ.


ಮಾಸ್ಕ್ ಧರಿಸಿದ್ದರೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬದುಕುತ್ತಿದ್ದರು -ಜಗದೀಶ್ ಶೆಟ್ಟರ್, ಸಚಿವ
ಗಡಿಯಲ್ಲಿ ಮಾಸ್ಕ್ ಕೊರತೆ ಬಿದ್ದಿರಬಹುದೇ?


ಕೊರೋನ ಮಹಾಮಾರಿಯ ನಡುವೆಯೂ ದೇಶದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಸಾಧನೆ ಮಾಡಲಾಗಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಹೆಮ್ಮಾರಿಗೆ ರಾಷ್ಟ್ರೀಯ ಹೆದ್ದಾರಿಯನ್ನು ಮುಕ್ತವಾಗಿಸುವ ಮೂಲಕ ಇರಬಹುದು.


ಭಾರತ ಯಾವತ್ತೂ ಜಗತ್ತಿನ ಶಾಂತಿ, ಭದ್ರತೆ, ಸಮೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತದೆ - ಅಮಿತ್ ಶಾ, ಕೇಂದ್ರ ಸಚಿವ
ಅದುವೇ ಭಾರತದ ಸಮಸ್ಯೆಗೆ ಕಾರಣ ಎಂದು ನೀವು ಅವುಗಳನ್ನು ಕೆಡಿಸಲು ಹೊರಟಿದ್ದೀರಿ ಎಂದು ಕಾಣುತ್ತದೆ.


ಬಿಜೆಪಿ ಮುಕ್ತ ಭಾರತಕ್ಕಾಗಿ ಮತ್ತೊಂದು ಸ್ವಾತಂತ್ರ ಹೋರಾಟ ಅನಿವಾರ್ಯ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಮೊದಲು ಆಲಸ್ಯ ಮುಕ್ತ ಕಾಂಗ್ರೆಸ್‌ಗಾಗಿ ಒಂದು ಹೋರಾಟ ನಡೆಸಿ.


ನಾವು ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಕೇಳಿಸಿಕೊಂಡರೆ ಸಾಕೇ? ಪರಿಹಾರವೂ ಸೂಚಿಸಬೇಡವೇ?


ಈಗ ಲಡಾಖ್‌ನ ಎಲ್‌ಎಸಿಯಲ್ಲಿ ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ ಎನ್ನುವ ಸ್ಥಿತಿ ಇದೆ - ಆರ್.ಕೆ.ಎಸ್.ಭದೌರಿಯಾ, ವಾಯುಸೇನೆ ಮುಖ್ಯಸ್ಥ
ಇಡೀ ದೇಶದ ಕತೆಯೂ ಇದೇ ಆಗಿದೆ.


ನಾವು ಸರ್ಕಸ್ ಮಾಡಿ ರಾಜ್ಯ ಸರಕಾರ ನಡೆಸುತ್ತಿದ್ದೇವೆ - ಜಗದೀಶ್ ಶೆಟ್ಟರ್, ಸಚಿವ
 ಸರ್ಕಸ್‌ನಲ್ಲಿ ಜೋಕರ್ ಪಾತ್ರವನ್ನು ರಾಜ್ಯದ ಪಕ್ಷಾಧ್ಯಕ್ಷರಿಗೆ ಕೊಟ್ಟಂತಿದೆ.


ನಿಮ್ಮನ್ನ್ನು 5 ವರ್ಷ ಮುಖ್ಯಮಂತ್ರಿ ಮಾಡುತ್ತೇನೆ, ಬಿಜೆಪಿಗೆ ಬನ್ನಿ ಎಂದು ಖುದ್ದು ಪ್ರಧಾನಿ ಮೋದಿ ಆಹ್ವಾನಿಸಿದರೂ ನಾನು ಹೋಗಲಿಲ್ಲ- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಗುಜರಾತ್‌ನ ಮುಖ್ಯಮಂತ್ರಿ ಮಾಡುವ ಭರವಸೆ ನೀಡಿರಬೇಕು.


ಉಪ ಚುನಾವಣೆಯು ಸರಕಾರ ಮತ್ತು ಪಕ್ಷಕ್ಕೆ ಪ್ರಿಪರೇಟರಿ ಪರೀಕ್ಷೆ ಇದ್ದಂತೆ - ಕೆ.ಎಸ್.ಈಶ್ವರಪ್ಪ, ಸಚಿವ
ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯುವ ಉದ್ದೇಶವಿದೆಯೇ?


ಅಮೆರಿಕ ಈವರೆಗೆ ಕಂಡಿರುವ ಅತ್ಯುತ್ತಮ ಅಧ್ಯಕ್ಷ ಎಂದರೆ ಅದು ನಾನೇ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
 ತಪ್ಪು ನುಸುಳಿದೆ, ಅತ್ಯುತ್ತಮ ಅದಕ್ಷ ಇರಬೇಕು...


ಮಥುರಾದ ಕೃಷ್ಣ ಜನ್ಮ ಸ್ಥಾನದ ಸ್ಥಳವನ್ನು ಮುಸ್ಲಿಮರು ಸ್ವಯಂ ಪ್ರೇರಿತರಾಗಿ ಬಿಟ್ಟುಕೊಟ್ಟರೆ ವಿವಾದ ಶಾಂತಿಯುತವಾಗಿ ಬಗೆಹರಿಯುತ್ತದೆ - ವಿನಯ್ ‌ಕಟಿಯಾರ್, ಮಾಜಿ ಸಂಸದ
ಕೃಷ್ಟ ಹುಟ್ಟಿದ್ದು ಸೆರೆಮನೆಯಲ್ಲಿ ತಾನೇ? ಯಾವ ಜೈಲಿನಲ್ಲಿ ಕೃಷ್ಣ ಹುಟ್ಟಿದ್ದು ಎನ್ನುವುದನ್ನು ಹೇಳಿ, ಆ ಜೈಲನ್ನು ನಿಮಗೆ ಬಿಟ್ಟುಕೊಡುವ.


ಜನರು ವರ್ಷಕ್ಕೊಮ್ಮೆಯಾದರೂ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು - ಶ್ರೀರಾಮುಲು, ಸಚಿವ
ಉಪಮುಖ್ಯಮಂತ್ರಿಯಾಗುವ ಬಯಕೆ ತಮ್ಮ ರಕ್ತದೊತ್ತಡ, ಮಧುಮೇಹವನ್ನು ಅಧಿಕಗೊಳಿಸಿರಬೇಕು.


ಭಾರತದಲ್ಲಿ ಔಷಧ ಮತ್ತು ವೈದ್ಯಕೀಯ ಸಾಧನೆ ಕ್ಷೇತ್ರದಲ್ಲಿ ಹೂಡಿಕೆಗೆ ಇದು ಸಕಾಲ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಬಹುಶಃ ಮಾಸ್ಕ್ ತಯಾರಿಕಾ ಉದ್ದಿಮೆಯ ಬಗ್ಗೆ ಹೇಳುತ್ತಿರಬೇಕು.

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಲು ನಿರುದ್ಯೋಗ ಕಾರಣ- ನ್ಯಾ. ಮಾರ್ಕಂಡೇಯ ಕಟ್ಟು, ನಿವೃತ್ತ ನ್ಯಾಯಮೂರ್ತಿ
ನಿರುದ್ಯೋಗಕ್ಕೆ ಕಾರಣರಾಗಿರುವ ರಾಜಕಾರಣಿಗಳ ಮೇಲೆ ಅತ್ಯಾಚಾರ ನಡೆಯುತ್ತಿಲ್ಲವಲ್ಲ?


ಮೈತ್ರಿಗೆ ಕಾಂಗ್ರೆಸ್ ಯೋಗ್ಯ ಪಕ್ಷವಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 ಕಾಂಗ್ರೆಸ್ ಜತೆ ಮೈತ್ರಿ ಮಾಡಿದಾಗ ತಾವು ಅಯೋಗ್ಯ ಮುಖ್ಯಮಂತ್ರಿಯಾಗಿದ್ದಿರೇ?


ರಣ ಹದ್ದುಗಳ ಸಂರಕ್ಷಣೆಗೆ ರಾಮನಗರದಲ್ಲಿ ಫೀಡಿಂಗ್ ಕ್ಯಾಂಪ್ ನಿರ್ಮಾಣ -ಆನಂದ್ ಸಿಂಗ್, ಅರಣ್ಯ ಸಚಿವ
 ರಾಜಕಾರಣಿಗಳು ಈಗಾಗಲೇ ಉಂಡು ತೇಗಿದ್ದು ಸಾಲದೇ?


ಚುನಾವಣೆಯಲ್ಲಿ ವ್ಯಾಪಾರ ಮಾಡಿಯೇ ನಾನು ಇಲ್ಲಿಗೆ ಬಂದಿರುವುದು - ಕೆ.ಎಸ್.ಈಶ್ವರಪ್ಪ, ಸಚಿವ
 ನೀವು ಎಷ್ಟಕ್ಕೆ ಮಾರಾಟವಾದಿರಿ ಎನ್ನುವುದನ್ನು ಹೇಳಿ.

share
ಪಿ.ಎ.ರೈ
ಪಿ.ಎ.ರೈ
Next Story
X