ಕುತ್ತೆತ್ತೂರು ಬೈದಪುಳಿತ್ತೂರು ಮನೆಯಲ್ಲಿ ಬೆಂಕಿ ಅವಘಡ

ಸುರತ್ಕಲ್: ಕುತ್ತೆತ್ತೂರು ಗ್ರಾಮದ ಪ್ರತಿಷ್ಟಿತ ಬೈದಪುಳಿತ್ತೂರು ಮನೆ ಇಂದು ಮಧ್ಯಾಹ್ನ ನಡೆದ ಅಗ್ನಿ ಅನಾಹುತದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ.
ಮನೆತನದ ಸದಸ್ಯ ನಾಗೇಶ್ ಎಂಬವರು ಬೆಳಿಗ್ಗೆ ಮನೆಯಿಂದ ಅನತಿ ದೂರದಲ್ಲಿದ್ದ ದೈವಸ್ಥಾನದಲ್ಲಿ ದೀಪ ಇಟ್ಟು ಕೈಮುಗಿದು ಬಂದಿದ್ದರು. ಮಧ್ಯಾಹ್ನದ ಹೊತ್ತಿಗೆ ಮನೆ ಹೊತ್ತಿ ಉರಿಯುತ್ತಿರುವುದನ್ನು ಕಂಡು ಸ್ಥಳೀಯರೊಬ್ಬರು ನಾಗೇಶ್ ಅವರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದರು. ಅವರು ಸ್ಥಳಕ್ಕೆ ಆಗಮಿಸಿದಾಗ ಮನೆ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಅಗ್ನಿಶಾಮಕ ದಳ ಮತ್ತು ಸುರತ್ಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಂಡರು.
ಮನೆಯಲ್ಲಿ ಅಮೂಲ್ಯ ವಸ್ತುಗಳು ಸೇರಿದಂತರ ಸುಮಾರು ಹದಿನೆಂಟು ಲಕ್ಷರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
Next Story





