ಡಾ.ಎನ್.ಉಡುಪ ಆತ್ಮಕಥನ ಬಿಡುಗಡೆ

ಮಣಿಪಾಲ, ಅ.5: ಮಾಹೆಯ ಸಂಶೋಧನಾ ನಿರ್ದೇಶನಾಲಯದ ಸಂಶೋಧನ ನಿರ್ದೇಶಕರಾಗಿರುವ ಡಾ.ಎನ್. ಉಡುಪ ಅವರ ಆತ್ಮಕಥನ ‘ಸಮರ್ಪಣ’ವನ್ನು ಮಣಿಪಾಲ ಮಾಹೆ ವಿವಿಯ ಪ್ರೊ ವೈಸ್ ಚಾನ್ಸಲರ್ ಡಾ. ಪಿಎಲ್‌ಎನ್‌ಜಿ ರಾವ್ ಅವರು ಬಿಡುಗಡೆಗೊಳಿಸಿದರು.
ಮಣಿಪಾಲ ಎಂಕಾಪ್ಸ್‌ನ ಪ್ರಾಂಶುಪಾಲರಾಗಿ ಹಾಗೂ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾಗಿ ಡಾ.ಎನ್.ಉಡುಪ ಅವರ ಸೇವೆ ಮತ್ತು ಸಾಧನೆ ಅತ್ಯಂತ ಶ್ಲಾಘನೀಯ ಎಂದು ಡಾ.ರಾವ್ ನುಡಿದರು.
ಈ ಸಂದರ್ಭದಲ್ಲಿ ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯೂಟಿಕಲ್ ಸಾಯನ್ಸ್‌ನ ಪ್ರಾಂಶುಪಾಲ್ ಡಾ.ಸಿ.ಮಲ್ಲಿಕಾರ್ಜುನ ರಾವ್ ಹಾಗೂ ಡಾ. ಎನ್. ಉಡುಪ ಅವರು ಉಪಸ್ಥಿತರಿದ್ದರು.
ಮಾಹೆ ಆಡಳಿತ ನೀಡಿದ ನಿರಂತರ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಡಾ.ಎನ್.ಉಡುಪ, ಸಂಶೋಧನೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನ ಕೊಡುಗೆಯನ್ನು ಮುಂದುವರಿಸುವುದಾಗಿ ನುಡಿದರು.
ಫಾರ್ಮಸ್ಯೂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಮುತಾಲಿಕ್ ವಂದಿಸಿದರು.
Next Story





