ವಿದ್ಯುತ್ ಚಾಲಿತ ಸಂಚಾರಿ ಶೀತಲೀಕೃತ ಶವರಕ್ಷಣಾ ಯಂತ್ರ ಲೋಕಾರ್ಪಣೆ

ಉಡುಪಿ, ಅ.5: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರ ಎರಡನೇ ಹಂತದ ಯೋಜನೆ ‘ವಿದ್ಯುತ್ ಚಾಲಿತ ಸಂಚಾರಿ ಶೀತಲೀಕೃತ ಶವರಕ್ಷಣಾ ಯಂತ್ರದ ಲೋಕಾರ್ಪಣೆ ಹಾಗೂ ಯಂತ್ರ ಭದ್ರತಾ ಕುಟೀರದ ಉದ್ಘಾಟನೆ ಕಾರ್ಯ ಕ್ರಮವು ಇಂದು 80ಬಡಗುಬೆಟ್ಟು ಶಾಂತಿನಗರದ ‘ನಿಮ್ಮ ಮನೆ’ಯಲ್ಲಿ ನಡೆಯಿತು.
ಶವ ರಕ್ಷಣಾ ಯಂತ್ರದ ಭದ್ರತಾ ಕುಟೀರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ ನಾಯಕ್ ಉದ್ಘಾಟಿಸಿದರು. ಶವ ರಕ್ಷಣಾ ಯಂತ್ರ ವನ್ನು ಉದ್ಯಮಿ ಸುಧಾಕರ್ ಪೂಜಾರಿ ಲೋಕಾರ್ಪಣೆ ಮಾಡಿದರು. ನಿವೃತ ಬ್ಯಾಂಕ್ ಅಧಿಕಾರಿ ಎಚ್.ಎ.ಇಬ್ರಾಹಿಂ, ಸಾಮಾಜಿಕ ಕಾರ್ಯ ಕರ್ತೆಯರಾದ ಶ್ರೀದೇವಿ, ಅನಿತಾ ಮೊನಿಕ್, ನೀರಜಾ ಶೆಟ್ಟಿ, ನಾಗರಿಕ ಸಮಿತಿಯ ಕೆ.ಬಾಲಗಂಗಾಧರ ರಾವ್, ಲಕ್ಷ್ಮೀನಾರಾಯಣ ಉಪಾಧ್ಯ, ತಾರಾನಾಥ್ ಮೇಸ್ತ ಶಿರೂರು, ರಾಘವೇಂದ್ರ ರಾವ್, ಆಶಾ ಕಾರ್ಯಕರ್ತೆರಾದ ಸವಿತಾ, ಸುರೇಖ, ತಿಲಕ ವತಿ, ಕಿರಿಯ ಆರೋಗ್ಯ ಸಹಾಯಕಿರಾದ ುಮುನ, ಹರಿಣಾಕ್ಷಿ ಉಪಸ್ಥಿತರಿದ್ದರು.
‘ಕಳೆದ ಮೂರು ವರ್ಷಗಳಿಂದ ನಾಗರಿಕ ಸಮಿತಿಯಿಂದ ಎರಡು ಶವ ರಕ್ಷಣಾ ಯಂತ್ರಗಳು ಉಡುಪಿ, ಬ್ರಹ್ಮಾವರ, ಕಾಪು ತಾಲೂಕುಗಳಲ್ಲಿ ಉಚಿತ ವಾಗಿ ಒದಗಿಸಲಾಗುತ್ತಿದೆ. ಬೇಡಿಕೆ ಹೆಚ್ಚಾದ ಕಾರಣ ಮಣಿಪಾಲ ಕೇಂದ್ರ ವಾಗಿಟ್ಟುಕೊಂಡು ಹೊಸ ಯಂತ್ರವನ್ನು ಇಡಲಾಗಿದೆ. ಈ ಯಂತ್ರವನ್ನು ಮಣಿಪಾಲ, ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಶ್ಯಕತೆ ಇರುವವರು ಉಚಿತವಾಗಿ ಬಳಸಬಹುದಾಗಿದೆ. ಸಾಗಾಟದ ವೆಚ್ಚವನ್ನಷ್ಟೆ ಬಳಕೆ ದಾರರು ಭರಿಸಬೇಕಾಗುತ್ತದೆ. ಬಳಕೆಯಾದ ಬಳಿಕ ಯಂತ್ರವನ್ನು ಯಥಾ ರೂಪದಲ್ಲಿ ಹಿಂತಿರುಗಿಸಬೇಕೆಂದು ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದರು.







