ಅಂದರ್ ಬಾಹರ್: ಆರು ಮಂದಿ ಬಂಧನ
ಕಾಪು, ಅ.4: ಶಂಕರಪುರ ಲವೀನಾ ಬೇಕರಿ ಹಿಂಬದಿ ಅ.4ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಶಂಕರಪುರದ ನಾಗರಾಜ್ (35), ಗಣೇಶ್ ಪೂಜಾರಿ (42), ಹರೀಶ್ (40), ನಾರಾಯಣ ಯಾದವ(42), ಬೆಳವಾಯಿಯ ಸುದೀಪ್ ಕುಮಾರ್ (34), ಕೆಮ್ಮಣ್ಣುವಿನ ಮಹೇಶ್ ಪೂಜಾರಿ(35) ಬಂಧಿತ ಆರೋಪಿಗಳು. ಡೆನಿಲ್ ಡಿಸೋಜ ಯಾನೆ ಬುಲ್ಲಾ ಎಂಬಾತ ಓಡಿ ಪರಾರಿಯಾಗಿದ್ದಾನೆ.
ಬಂಧಿತರಿಂದ 5,400ರೂ. ನಗದು, ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





