Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಜೈಲು, ಎಫ್‍ಐಆರ್ ಗಳಿಂದ ನನ್ನ ಬಾಯಿ...

ಜೈಲು, ಎಫ್‍ಐಆರ್ ಗಳಿಂದ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್

ವಾರ್ತಾಭಾರತಿವಾರ್ತಾಭಾರತಿ5 Oct 2020 8:57 PM IST
share
ಜೈಲು, ಎಫ್‍ಐಆರ್ ಗಳಿಂದ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.5: ಮುಖ್ಯಮಂತ್ರಿ ಸಿಬಿಐ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಸೆ.30ರಂದು ಈ ಬಗ್ಗೆ ಎಫ್‍ಐಆರ್ ಆಗಿದೆ. ಉಪ ಚುನಾವಣೆ ಬಂದು, ನಾನು ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ ನಂತರ ಈ ದಾಳಿ ಆಗಿದೆ. ಇದನ್ನೆಲ್ಲ ನೋಡಿ ಓಡಿ ಹೋಗುತ್ತೇನೆಯೇ? ವಿಧಾನಸೌಧದಲ್ಲೆ ಹೇಳಿದ್ದೇನೆ. ಈ ಜೈಲು, ಎಫ್‍ಐಆರ್ ಗಳಿಂದ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ಸಂಜೆ ತಮ್ಮ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ 30 ವರ್ಷದ ರಾಜಕಾರಣದಲ್ಲಿ 7 ಬಾರಿ ಜನ ನನ್ನನ್ನು ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ನನ್ನ ಮೇಲೆ, ಈವರೆಗೆ ಯಾವುದಾದೂ ತನಿಖೆ ನಡೆದಿದೆಯೇ, ತನಿಖಾ ಆಯೋಗ ರಚನೆಯಾಗಿದೆಯೆ, ನಾನು ಯಾವುದಾದರೂ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಣೆಯಾಗಿದೆಯೆ? ಐಟಿ, ಈಡಿ ಬಿಟ್ಟರೆ ನನ್ನ ಮೇಲೆ ಒಂದೇ ಒಂದು ಎಫ್‍ಐಆರ್ ಆಗಿದೆಯೇ ಎಂದು ಪ್ರಶ್ನಿಸಿದರು.

ನಗರಾಭಿವೃದ್ಧಿ, ಸಹಕಾರ, ಇಂಧನ, ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ ಕೈಗೊಂಡ ತೀರ್ಮಾನಗಳನ್ನು ಒಳಗೊಂಡ ಎಲ್ಲ ಕಡತಗಳನ್ನು ಜಾಲಾಡಿಸಿದ್ದೀರಾ, ಏನಾದರೂ ತಪ್ಪು ಕಂಡಿತೆ? ನಾನು ತಪ್ಪು ಮಾಡಿದ್ದರೆ ನಿಮ್ಮ ಸರಕಾರ ಕೊಡುವ ಶಿಕ್ಷೆಗೆ ಬದ್ಧನಾಗಿರುತ್ತೇನೆ ಎಂದು ಮುಖ್ಯಮಂತ್ರಿಗೆ ಶಿವಕುಮಾರ್ ಸವಾಲು ಹಾಕಿದರು.

ನನ್ನ ಬಳಿಯೂ ಅಗತ್ಯವಿರುವ ಮಾಹಿತಿ, ದಾಖಲೆಗಳು ಇವೆ. ಸಂದರ್ಭ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇನೆ. ಆದಾಯ ತೆರಿಗೆ, ಈಡಿಯವರು ನನ್ನನ್ನು ನಂಬಿದ 140 ಜನರಿಗೆ ಬೆಳಗ್ಗೆ, ಸಂಜೆ ಕಿರುಕುಳ ನೀಡುತ್ತಿದ್ದಾರೆ. ನಿಮ್ಮ ಕುಟುಂಬದವರಿಗೆ ಈ ರೀತಿ ಕಿರುಕುಳ ನೀಡಿದ್ದರೆ ಏನು ಮಾಡುತ್ತಿದ್ರಿ ಎಂದು ಅವರು ಪ್ರಶ್ನಿಸಿದರು.

ಯಾರ ವಿರುದ್ಧವೂ ಪ್ರಕರಣಗಳು ಇಲ್ಲವೇ, ದಾಖಲೆಗಳು ಇಲ್ಲವೇ ? ಸರಕಾರ ಕಣ್ಣು ಮುಚ್ಚಿ ಕೂತಿದೇಯಾ ? ಡಿ.ಕೆ.ಶಿವಕುಮಾರ್ ಮಾತ್ರ ನಿಮಗೆ ಸಿಕ್ಕಿದ್ದಾ, ಬೇರೆ ಯಾರೂ ಸಿಕ್ಕಿಲ್ಲವೇ, ಈ ಕುತಂತ್ರಕ್ಕೆ, ಒತ್ತಡಕ್ಕೆ ನಾನು ಮಣಿಯಲ್ಲ. ಇವೆಲ್ಲ ರಾಜಕಾರಣ. ಮತದಾರನ ಬಳಿ ಬನ್ನಿ ಹೋಗಿ ಮಾತನಾಡೋಣ ಎಂದು ಶಿವಕುಮಾರ್ ಹೇಳಿದರು.

ನನ್ನ ಮನೆಯಲ್ಲಿ 1.87 ಲಕ್ಷ ರೂ.ಸಿಕ್ಕಿದೆ. ಪಕ್ಕದ ಕಚೇರಿಯಲ್ಲಿ 2-3 ಲಕ್ಷ ರೂ., ದಿಲ್ಲಿಯಲ್ಲಿ 2-3 ಲಕ್ಷ ರೂ.ಸಿಕ್ಕಿದೆ. ಸುರೇಶ್ ಮನೆಯಲ್ಲಿ 1.70 ಲಕ್ಷ ರೂ.ಸಿಕ್ಕಿದೆ. ಅದು ಬಿಟ್ಟರೆ ನನಗೆ ಸಂಬಂಧ ಇಲ್ಲದೆ ಇರುವವರ ಮನೆಯಲ್ಲಿ ಏನು ಸಿಕ್ಕಿದೆ ಎಂದು ನನಗೇನು ಗೊತ್ತು. ಊರಿನಲ್ಲಿ ನನ್ನ ತಾಯಿಯ ಮನೆಯಲ್ಲಿ ಏನು ಸಿಕ್ಕಿದೆ ಅಂತಾನೂ ನನಗೆ ಗೊತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.

2013 ರಿಂದ 2018ರವರೆಗೆ ನಾನು ಸಚಿವನಾಗಿದ್ದಾಗ ಏನೇನು ಮಾಡಿದ್ದೇನೆ ಅನ್ನೋದನ್ನು ಅವರೇ ಪತ್ತೆ ಹಚ್ಚಲಿ. ನಾನು ಕಾನೂನಿಗೆ ಗೌರವ ಕೊಡುವ ವ್ಯಕ್ತಿ. ಸಿಬಿಐನವರು ಕರೆದಾಗ ನಾನು ಹೋಗುತ್ತೇನೆ. ಎಫ್‍ಐಆರ್ ಮಾಡಿದ್ದಾರೆ ತನಿಖೆ ಮಾಡಲಿ, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಮರ್ಥನಿದ್ದೇನೆ ಎಂದು ಶಿವಕುಮಾರ್ ಹೇಳಿದರು.

2017ರಲ್ಲಿ ಇದೇ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದ್ದರು. ಆಗ ನಾನು ಗುಜರಾತ್ ಚುನಾವಣೆ ಸಂದರ್ಭದಲ್ಲಿ ಶಾಸಕರಿಗೆ ಆಶ್ರಯ ನೀಡಿದ್ದೆ. ಒಂದು ವರ್ಷದ ನಂತರ ಎಕನಾಮಿಕ್ಸ್ ಅಫೇನ್ಸ್ ಕೋರ್ಟ್‍ನವರು ನನ್ನ ಮೇಲೆ ಪ್ರಕರಣ ದಾಖಲು ಮಾಡಿದರು. ನ್ಯಾಯಾಲಯ ನನಗೆ ಜಾಮೀನು ನೀಡಿತು. ಕೆಲವು ಪ್ರಕರಣಗಳು ವಜಾ ಆದವು, ಮತ್ತೆ ಕೆಲವು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.

2019ರಲ್ಲಿ ನನ್ನ ಮೇಲೆ ಈಡಿ ಪ್ರಕರಣ ಆಯಿತು. 48 ದಿನ ತಿಹಾರ್ ಜೈಲಿನಲ್ಲಿದ್ದೆ. ನನ್ನ ವಕೀಲರ ವಾದ ಆಲಿಸಿ ನ್ಯಾಯಾಲಯ ಚಾರ್ಜ್‍ಶೀಟ್ ಹಾಕುವ ಮುನ್ನ ನನಗೆ ಜಾಮೀನು ನೀಡಿತು. ಆ ಸಂದರ್ಭದಲ್ಲಿಯೂ ಇಡೀ ದೇಶದ ಉದ್ದಗಲಕ್ಕೂ ನಮ್ಮ ಪಕ್ಷದ ಮುಖಂಡರು, ವಿವಿಧ ಪಕ್ಷದ ಮುಖಂಡರು, ರೈತ ಪರ, ಕನ್ನಡ ಪರ ಸಂಘಟನೆಗಳು, ವಿವಿಧ ಮಠಗಳ ಸ್ವಾಮೀಜಿಗಳು, ಸರ್ವ ಧರ್ಮದ ಮುಖಂಡರು ನನ್ನ ಪರವಾಗಿ ನಿಂತರು ಎಂದು ಅವರು ಹೇಳಿದರು.

ನಾನು ಜೈಲಿನಿಂದ ಬಂದಾಗ ಇಂತಹ ಮೆರವಣಿಗೆ ಬೇಕೆ ಎಂದು ಕೆಲವು ಮಾತನಾಡಿದರು. ಪರಪ್ಪನ ಅಗ್ರಹಾರದಿಂದ ಕೆಲವರು ಬಂದರಲ್ಲ, ಅವರು ಯಾವ ರೀತಿ ಬಂದರು, ಏನಾಯಿತು ಅನ್ನೋದನ್ನ ನಾನು ಹೇಳಬೇಕಿಲ್ಲ. ಈಗ ಮಾತನಾಡುತ್ತಿರುವವರು ಅದನ್ನು ನೆನೆಸಿಕೊಂಡರೆ ಸಾಕು. ನಾನು ವಿಜಯದ ಸಂಕೇತ ತೋರಿಸಿಕೊಂಡು ಹೊರಗೆ ಬಂದಿಲ್ಲ, ಕೈ ಮುಗಿದುಕೊಂಡು, ನೊಂದು, ಬೆಂದು ಹೊರಗೆ ಬಂದಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ಕೇಂದ್ರ ಸರಕಾರ ಕೊರೋನ ಹಿನ್ನೆಲೆಯಲ್ಲಿ 20 ಲಕ್ಷ ಕೋಟಿ ರೂ., ರಾಜ್ಯ ಸರಕಾರ 1700 ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿತು. ಆದರೆ, ಅದು ಜನರಿಗೆ ತಲುಪಿಲ್ಲ. ಸರಕಾರದ ಹಣ ಬಳಸಿಕೊಂಡು ಸ್ವಂತ ಪಕ್ಷದ ಬೆಳವಣಿಗೆಗೆ ಬಿಜೆಪಿ ಸ್ನೇಹಿತರು ಹೊರಟರು. ಅದನ್ನು ನೋಡಿಕೊಂಡು ನಾನು ಕೂರಲು ಸಾಧ್ಯವೇ? ಶ್ರಮಿಕರು, ಯುವಕರು, ರೈತರು, ಕೃಷಿಕರ ಪರವಾಗಿ, ಅಸಂಘಟಿತ ವಲಸೆ ಕಾರ್ಮಿಕರು, ಸವಿತಾ ಸಮಾಜದವರು, ಚಾಲಕರ ಪರವಾಗಿ ಧ್ವನಿ ಎತ್ತಬೇಕಾದ್ದು ನನ್ನ ಕರ್ತವ್ಯ. ಅದನ್ನು ಮಾಡಿದ್ದೇನೆ ಎಂದು ಅವರು ತಿಳಿಸಿದರು.

ನಮ್ಮ ರಾಜ್ಯದ ಜನ ನರಳುತ್ತಿದ್ದಾರೆ. ಕೋವಿಡ್ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಶೇ.300-400ರಷ್ಟು ಲೂಟಿ ಆಗಿದೆ. ಅದನ್ನು ಖಂಡಿಸಿ ಹೋರಾಟ ಮಾಡಿದೇವು. ಸದನದ ಒಳಗೆ ಹಾಗೂ ಹೊರಗೆ ಧ್ವನಿ ಎತ್ತಿದ್ದೇವೆ. ಇನ್ನು ಕೆಲವು ವಿಚಾರಗಳಿದ್ದವು, ಕೆಲವರ ಹೆಸರನ್ನು ಹೇಳಲು ನಮ್ಮ ಕಾನೂನು ಸಚಿವರು ಸದನದಲ್ಲಿ ಅವಕಾಶ ನೀಡಿಲ್ಲ. ನಾನು ಜೈಲಿನಿಂದ ಬಂದಾಗ ನಡೆದ ಮೆರವಣಿಗೆ ಬಗ್ಗೆ ಮಾತನಾಡಿದರು. ಆದರೆ, ಪಾಪ ಅವರ ನಾಯಕರ ಮೆರವಣಿಗೆಯನ್ನು ಮರೆತಿದ್ದಾರೆ ಎಂದು ಶಿವಕುಮಾರ್ ತಿರುಗೇಟು ನೀಡಿದರು.

ಕೇಂದ್ರದಲ್ಲಿಯೂ ಬಹಳ ವಿಚಾರಗಳಿವೆ, ಒಂದು ದಲಿತ ಹೆಣ್ಣು ಮಗಳ ಅತ್ಯಾಚಾರವಾಗಿ, ಆಕೆಗೆ ಕೊಡಬಾರದ ನೋವು ಕೊಟ್ಟು, ಅವರ ಕುಟುಂಬಕ್ಕೆ ಸಾಂತ್ವನ ಹೇಳದೆ, ಆಕೆಯ ಕುಟುಂಬದವರಿಗೆ ಅಂತಿಮ ದರ್ಶನಕ್ಕೂ ಅವಕಾಶ ನೀಡದಂತೆ ಬಿಜೆಪಿ ಸರಕಾರ ವರ್ತಿಸಿತು. ನಿರ್ಭಯಾ ಪ್ರಕರಣದ ಸಂದರ್ಭದಲ್ಲಿ ಆಕೆಯ ಮೃತದೇಹ ಮಲೇಶಿಯಾದಿಂದ ತಂದಾಗ ಆಗಿನ ಪ್ರಧಾನಿ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಇವತ್ತು ಆ ದಲಿತ ಹೆಣ್ಣುಮಗಳಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯ ಹೇರಲು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಅವಕಾಶವನ್ನು ನೀಡದೆ, ಬೆಳ್ಳಂ ಬೆಳಗ್ಗೆ ಸಿಬಿಐನವರು ದಾಳಿ ಮಾಡಿದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲ್ಲ. ಆದರೆ, ಇದೊಂದು ರಾಜಕೀಯ ಪಿತೂರಿ. ಮತದಾರರ ಮೇಲೆ ನನಗೆ ನಂಬಿಕೆಯಿದೆ. ಈ ಬಗ್ಗೆ ಅವರೇ ತೀರ್ಪು ನೀಡಲಿ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಡಿ.ಕೆ.ಸುರೇಶ್ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X