ಜಗತ್ತಿನ 10ರಲ್ಲಿ ಒಬ್ಬ ವ್ಯಕ್ತಿ ಕೊರೋನ ಸೋಂಕು ಪೀಡಿತ: ವಿಶ್ವ ಆರೋಗ್ಯ ಸಂಸ್ಥೆ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 5: ಈಗಾಗಲೇ ಜಗತ್ತಿನ ಸುಮಾರು 10ರಲ್ಲಿ ಒಬ್ಬ ವ್ಯಕ್ತಿ ಕೊರೋನ ವೈರಸ್ ಸೋಂಕಿಗೆ ಗುರಿಯಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ತಿಳಿಸಿದೆ. ಇದರೊಂದಿಗೆ ಜಗತ್ತಿನ ಅತಿ ಹೆಚ್ಚಿನ ಜನಸಮುದಾಯ ಈ ಸಾಂಕ್ರಾಮಿಕದ ಸೋಂಕಿಗೆ ಗುರಿಯಾಗುವ ಅಪಾಯ ಎದುರಾಗಿದೆ ಎಂದು ಸಂಸ್ಥೆಯ ತುರ್ತು ಪರಿಸ್ಥಿತಿ ಪರಿಣತ ಮೈಕ್ ರಯಾನ್ ಹೇಳಿದರು.
ಆಗ್ನೇಯ ಏಶ್ಯದ ಭಾಗಗಳಲ್ಲಿ ಸಾಂಕ್ರಾಮಿಕದ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಅದೂ ಅಲ್ಲದೆ, ಯುರೋಪ್ ಮತ್ತು ಪೂರ್ವ ಮೆಡಿಟರೇನಿಯನ್ ವಲಯದಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸಂಸ್ಥೆಯ ಕಾರ್ಯಕಾರಿ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.
Next Story





