ಅವೆುರಿಕದ 7 ರಾಜ್ಯಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ವಾಶಿಂಗ್ಟನ್, ಅ. 5: ಅಮೆರಿಕದ ಮೇಲಿನ ಮಧ್ಯಪಶ್ಚಿಮ ಮತ್ತು ಪಶ್ಚಿಮದ 9 ರಾಜ್ಯಗಳಲ್ಲಿ ಕಳೆದ ಏಳು ದಿನಗಳಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.
ಶನಿವಾರ ಒಂದೇ ದಿನ ಕೆಂಟಕಿ, ಮಿನಸೋಟ, ಮೊಂಟಾನ ಮತ್ತು ವಿಸ್ಕೋನ್ಸಿನ್ ಎಂಬ ನಾಲ್ಕು ರಾಜ್ಯಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಹೊಸ ಸೋಂಕುಗಳು ಸಂಭವಿಸಿವೆ ಹಾಗೂ ದೇಶವ್ಯಾಪಿ ಹೊಸ ಪ್ರಕರಣಗಳ ಸಂಖ್ಯೆ ಸುಮಾರು 49,000ವನ್ನು ದಾಟಿತು ಎಂದು ‘ರಾಯ್ಟರ್ಸ್’ ಸಂಗ್ರಹಿಸಿರುವ ಅಂಕಿಸಂಖ್ಯೆಗಳು ತಿಳಿಸಿವೆ.
ಕ್ಯಾನ್ಸಸ್, ನ್ಯೂಹ್ಯಾಂಪ್‌ಶಯರ್, ಸೌತ್ ಡಕೋಟ ಮತ್ತು ವ್ಯೋಮಿಂಗ್ ರಾಜ್ಯಗಳಲ್ಲೂ ಕಳೆದ ವಾರ ದಾಖಲೆಯ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ವರದಿಯಾಗಿವೆ.
Next Story