ದೋಣಿಯಿಂದ ವಲಸಿಗರನ್ನು ಸಮುದ್ರಕ್ಕೆ ಎಸೆದ ಕಳ್ಳಸಾಗಾಣಿಕೆದಾರರು
8 ಸಾವು; 12 ಮಂದಿ ನಾಪತ್ತೆ
ಪ್ಯಾರಿಸ್ (ಫ್ರಾನ್ಸ್), ಅ. 5: ಪೂರ್ವ ಆಫ್ರಿಕದ ಜಿಬೂಟಿ ದೇಶದ ಕರಾವಳಿಯಲ್ಲಿ ಮಾನವಕಳ್ಳಸಾಗಾಣಿಕೆದಾರರು ತಮ್ಮ ದೋಣಿಯಿಂದ ವಲಸಿಗರನ್ನು ಸಮುದ್ರಕ್ಕೆ ಎಸೆದಿದ್ದು ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ ಹಾಗೂ 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ವಲಸೆ ಸಂಘಟನೆ ತಿಳಿಸಿದೆ.
14 ಮಂದಿ ಬದುಕುಳಿದಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಘಟನೆಯು ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ವಲಸಿಗರೆಲ್ಲರು ಇಥಿಯೋಪಿಯನ್ನರು ಎಂಬುದಾಗಿ ಭಾವಿಸಲಾಗಿದೆ. ಅವರು, ಕೋವಿಡ್-19 ಗಡಿ ನಿರ್ಬಂಧಗಳಿಂದಾಗಿ ಯೆಮನ್ ಮೂಲಕ ಸೌದಿ ಅರೇಬಿಯವನ್ನು ತಲುಪಲಾಗದೆ ಹಾರ್ನ್ ಆಫ್ ಆಫ್ರಿಕಕ್ಕೆ ಮರಳುತ್ತಿದ್ದರು.
ಕೋವಿಡ್-19 ಸಾಂಕ್ರಾಮಿಕ ಮತ್ತು ಯೆಮನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಕೊಲ್ಲಿ ದೇಶಗಳಿಗೆ ವಲಸೆ ಹೋಗುವುದು ಈಗ ಹೆಚ್ಚು ಅಪಾಯಕಾರಿಯಾಗಿದೆ. ಹಾಗಾಗಿ, ಹೆಚ್ಚಿನ ವಲಸಿಗರು ವಾಪಸಾಗುತ್ತಿದ್ದಾರೆ.
Next Story





