ಬಜ್ಪೆಜಕ್ರಿ ಬ್ಯಾರಿ ಮಸ್ಜಿದ್ ಅಧ್ಯಕ್ಷರಾಗಿ ಬಿ. ಇಬ್ರಾಹೀಂ ಆಯ್ಕೆ

ಮಂಗಳೂರು, ಅ.6: ಬಜಪೆ ಗ್ರಾಮದ ಕೊಂಚಾರ್‌ನಲ್ಲಿರುವ ಬಜಪೆ ಜಕ್ರಿ ಬ್ಯಾರಿ ಬದ್ರ್ ಮಸ್ಜಿದ್ ಜಮಾಅತಿನ ಸಮಿತಿಯ ತುರ್ತು ಸಭೆ ರವಿವಾರ ಮಸೀದಿಯ ವಠಾರದಲ್ಲಿ ಜರುಗಿತು.
ಜಮಾಅತಿನ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನ ಹೊಂದಿದ ಹಾಜಿ ಬಿ. ಮುಹಮ್ಮದ್‌ರಿಗೆ ಸಂತಾಪ ಸಲ್ಲಿಸಲಾಯಿತು. ಅಲ್ಲದೆ ಮುಂದಿನ ಅಧ್ಯಕ್ಷರಾಗಿ ಮಾಜಿ ರಾಜ್ಯಸಭಾ ಸದಸ್ಯ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆರಿಸಲಾಯಿತು. ಉಪಾಧ್ಯಕ್ಷರಾಗಿ ಝಕಾರಿಯ (ಪುತ್ತು ಬಾವು) ಅವರನ್ನು ಆರಿಸಲಾಯಿತು.
ಸಭೆಯಲ್ಲಿ ನಿಸಾರ್ ಫಕೀರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಲಾಂ ವಂದಿಸಿದರು.
Next Story





