ದ.ಕ., ಉಡುಪಿ ಜಿಲ್ಲಾ ಹಾಪ್‌ಕಾಮ್ಸ್‌ಗೆ ಭಾಕಿಸಂನ 6 ಮಂದಿ ಆಯ್ಕೆ
ಉಡುಪಿ, ಅ.6: ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಬೆಂಬಲಿತ 6 ಮಂದಿ ರೈತ ಪ್ರತಿನಿಧಿಗಳು, ದ.ಕ ಮತ್ತು ಉಡುಪಿ ಜಿಲ್ಲಾ ಹಾಪ್‌ಕಾಮ್ಸ್‌ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಮುಂದಿನ ಐದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸಂಘ ನಿಯುಮಿತ (ಹಾಪ್‌ಕಾಮ್ಸ್) ಮಂಗಳೂರು ಇದರ ನಿರ್ದೇಶಕರಾಗಿ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಬೆಂಬಲಿತ 6 ರೈತ ಪ್ರತಿನಿಧಿಗಳು ಆಯ್ಕೆ ಆಗಿದ್ದಾರೆ. ಇವರಲ್ಲಿ ನಾಲ್ವರು ಅರೋಧವಾಗಿ ಆಯ್ಕೆಯಾಗಿದ್ದು, ಇಬ್ಬರು ಮಹಿಳಾ ಅಭ್ಯರ್ಥಿಗಳು ನಿನ್ನೆ ನಡೆದ ಚುನಾವಣೆಯಲ್ಲಿ ಭಾರೀ ಅಂತರದ ಮತಗಳಿಂದ ಜಯಗಳಿಸಿದ್ದಾರೆ ಎಂದು ಭಾಕಿಸಂ ಪ್ರಕಟಣೆ ತಿಳಿಸಿದೆ.
ಉಡುಪಿ ಜಿಲ್ಲೆಯಿಂದ ಅವಿರೋಧ ಆಯ್ಕೆಯಾದವರು: ಸೀತಾರಾಮ ಗಾಣಿಗ ಹಾಲಾಡಿ, ಹರೀಶ್ ಕುಮಾರ್ ಕಲ್ಯಾ, ಚೆನ್ನಕೇಶವ ಕಾರಂತ್ ಕಿರಿಮಂಜೇಶ್ವರ ಹಾಗೂ ಗಣೇಶ ನಾಯಕ್ ಉಳ್ಳೂರು-74. ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದವರು: ಅನ್ನಪೂರ್ಣ ಎಂ. ಉಡುಪ ನಾೂರು ಹಾಗೂ ವಿನಯಾ ರಾನಡೆ ಮಾಳ.
ಜಿಲ್ಲೆಯ ತೋಟಗಾರಿಕಾ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ ಹಾಪ್‌ಕಾಮ್ಸ್ ಮೂಲಕ ಹೆಚ್ಚಿನ ಪ್ರಯೋಜನ ಸಿಗುವಂತೆ ಮಾಡುವಲ್ಲಿ ಶ್ರಮಿ ಸುವ ಉದ್ದೇಶ ದಿಂದ ಸಂಘಟನೆ ಹಾಪ್‌ಕಾಮ್ಸ್‌ನಲ್ಲಿ ಸ್ಪರ್ಧಿಸಿದೆ ಎಂದು ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಜೈನ್ ಮತ್ತು ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ.







