ಅಮಿತ್ ಮಾಳವೀಯ, ದಿಗ್ವಿಜಯ ಸಿಂಗ್, ಸ್ವರಾ ಭಾಸ್ಕರ್ಗೆ ಎನ್ಸಿಡಬ್ಲ್ಯು ನೋಟಿಸ್
ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣ
ಹೊಸದಿಲ್ಲಿ,ಅ.6: ಹತ್ರಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಲಿಪಶು ಯುವತಿಯ ಗುರುತನ್ನು ಟ್ವಟರ್ನಲ್ಲಿ ಬಹಿರಂಗಗೊಳಿಸಿದ್ದಕ್ಕಾಗಿ ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಮತ್ತು ನಟಿ ಸ್ವರಾ ಭಾಸ್ಕರ್ ಅವರಿಗೆ ಪ್ರತ್ಯೇಕ ನೋಟಿಸ್ಗಳನ್ನು ಹೊರಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ(ಎನ್ಸಿಡಬ್ಲ್ಯು)ವು ಈ ಬಗ್ಗೆ ತೃಪ್ತಿಕರ ವಿವರಣೆಯನ್ನು ಸಲ್ಲಿಸುವಂತೆ ಸೂಚಿಸಿದೆ.
ಟ್ವಿಟರ್ನಲ್ಲಿ ಯುವತಿಯ ಗುರುತು ಬಹಿರಂಗಗೊಳಿಸಿರುವ ಪೋಸ್ಟ್ಗಳನ್ನು ತಕ್ಷಣವೇ ತೆಗೆಯುವಂತೆ ಮತ್ತು ಭವಿಷ್ಯದಲ್ಲಿ ಇಂತಹ ಪೋಸ್ಟ್ಗಳನ್ನು ಶೇರ್ ಮಾಡಿಕೊಳ್ಳದಂತೆ ಅವರಿಗೆ ಎನ್ಸಿಡಬ್ಲ್ಯು ನಿರ್ದೇಶವನ್ನೂ ನೀಡಿರುವುದಾಗಿ ಮಂಗಳವಾರ ಟ್ವೀಟ್ನಲ್ಲಿ ತಿಳಿಸಿದೆ.
Next Story