ಕಾರ್ಕಳದಲ್ಲಿ ವನ್ಯಜೀವಿ ಸಪ್ತಾಹಕ್ಕೆ ಚಾಲನೆ

ಉಡುಪಿ, ಅ.6: ವನ್ಯಜೀವಿ ಸಪ್ತಾಹ-2020 ಆಚರಣೆಯ ಅಂಗವಾಗಿ ಕುದುರೆಮುಖ ವನ್ಯಜೀವಿ ವಿಭಾಗದ ವತಿಯಿಂದ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಾಲನೆ ನೀಡಿದರು.
ಇಲಾಖೆಯಿಂದ ಕೋವಿಡ್-19 ಜನ ಜಾಗೃತಿ ಅರಿವು ಕುರಿತ ಸ್ತಬ್ಧ ಚಿತ್ರ ಜಾಥಾಕ್ಕೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಕೊರೊನಾ ವಾರಿಯರ್ಸ್‌ಗಳನ್ನು ಗುರುತಿಸಿ ಗೌರವ ಸಲ್ಲಿಸಲಾಯಿತು.
ಭಾರತ ಸರ್ಕಾರದ ಫಿಟ್ ಇಂಡಿಯಾ ಅಂದೋಲನದ ಅಂಗವಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಕಳದ ಪ್ರಮುಖ ರಸ್ತೆಯಲ್ಲಿ ಮ್ಯಾರ ಥಾನ್ ಓಟದಲ್ಲಿ ಪಾಲ್ಗೊಂಡರು.

Next Story





