ಕೆಂಪು ಭತ್ತ ತಳಿ ಸಹ್ಯಾದ್ರಿ ಪಂಚಮುಖಿ ಬೆಳೆಯ ಕ್ಷೇತ್ರೋತ್ಸವ

ಉಡುಪಿ, ಅ.6: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹೊಸದಿಲ್ಲಿ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವುಗಳ ವತಿಯಿಂದ ಕೆಂಪು ಭತ್ತ ತಳಿ ಸಹ್ಯಾದ್ರಿ ಪಂಚಮುಖಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಶಿರ್ಲಾಲು ಗ್ರಾಮದ ಧರಣೀಂದ್ರ ಜೈನ್ ಮನೆಯ ವಠಾರದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಜಯರಾಜ ಪ್ರಕಾಶ ಉದ್ಘಾಟಿಸಿ, ತಗ್ಗು ಪ್ರದೇಶಕ್ಕೆ ಹಲವಾರು ವರ್ಷಗಳಿಂದ ಹೊಸ ಭತ್ತದ ತಳಿಯ ಅವಶ್ಯಕತೆಯಿದ್ದು, ರೈತರಿಂದ ಇದಕ್ಕಾಗಿ ಬಹಳಷ್ಟು ಬೇಡಿಕೆ ಇತ್ತು. ಈಗ ಶಿವಮೊಗ್ಗ ಕೃಷಿ ವಿವಿ ಈಬೇಡಿಕೆ ಯನ್ನು ಈಡೇರಿಸಿರುವುದು ಸಂತೋಷದ ವಿಷಯ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಬಿ. ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷ್ಮಣ, ಶಿರ್ಲಾಲು ಗ್ರಾಮದ ನಿವೃತ್ತ ಪ್ರಾಂಶು ಪಾಲ ಹಾಗೂ ಪ್ರಗತಿ ಪರ ಕೃಷಿಕ ಗುಣಪಾಲ್ ಕಡಂಬ, ಕೇಂದ್ರದ ಕ್ಷೇತ್ರ ಅಧೀಕ್ಷಕ ಡಾ.ಎಂ. ಶಂಕರ್ ಉಪಸ್ಥಿತರಿದ್ದರು.
ಡಾ.ನವೀನ್ ಎನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಚೈತನ್ಯ ಹೆಚ್ ಎಸ್. ಸ್ವಾಗತಿಸಿ ಡಾ. ಸಚಿನ್ ಯು.ಎಸ್ ವಂದಿಸಿದರು.







