ಕುಮಾರಧಾರಾ ನದಿ ಸಂರಕ್ಷಣಾ ಅಭಿಯಾನ
ಮಂಗಳೂರು, ಅ.6: ಕರ್ನಾಟಕ ಜೀವವೈವಿಧ್ಯ ಮಂಡಳಿ, ಪಂಚಾಯತ್ ಜೀವವೈವಿಧ್ಯ ಸಮಿತಿಗಳು, ಅರಣ್ಯ ಇಲಾಖೆ ಇವುಗಳ ಸಹಯೋಗ ದಲ್ಲಿ ಗಾಂಧಿ ಜಯಂತಿ ದಿನದಿಂದ 3 ದಿನ ಕಾಲ ಕುಮಾರಧಾರಾ ನದಿ ಸಂರಕ್ಷಣಾ ಅಭಿಯಾನ ನಡೆಯಿತು.
ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನದಿ ರಕ್ಷಾ ಅಭಿಯಾನದ ನೇತೃತ್ವ ವಹಿಸಿದ್ದರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನದಿ ಮಾಲಿನ್ಯ ಸಮಸ್ಯೆ ನಿವಾರಣೆ ಬಗ್ಗೆ ನಾಗರಿಕರು, ಗ್ರಾಪಂ ಆಡಳಿತ, ದೇವಾಲಯ ಆಡಳಿತದ ಜೊತೆ ಸಮಾ ಲೋಚನಾ ಸಭೆ ನಡೆಸಲಾಯಿತು.
ಕುಮಾರಧಾರ ನದಿ ತೀರ ಉರುಂಭಿ ಪ್ರದೇಶವನ್ನು ಸೂಕ್ಷ್ಮ ಜೀವ ಸಂಕುಲ ತಾಣ ಎಂದು ಕಡಬ ತಾಪಂ ಸಭೆಯಲ್ಲಿ ಗುರುತಿಸಲಾಯಿತು. ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಪಂ ಸಮಿತಿ ಸಭೆಯಲ್ಲಿ ತಜ್ಞರ ತಂಡ ಮಾಯಿಲ ಕೋಟೆ ಗುಡ್ಡ ಪ್ರದೇಶಕ್ಕೆ ಸಂರಕ್ಷಣಾ ಕವಚ ತೊಡಿಸಲು ನಿರ್ಧರಿಸಿತು. ಸುಳ್ಯ ತಾಪಂ ಸಮಿತಿ ಸಭೆಯಲ್ಲಿ ನದಿ ಕಣಿವೆಗಳಲ್ಲಿರುವ ಮಿರಿಸ್ವಿಕಾ ಸ್ವಾಂಪ್ಸ್‌ಗಳನ್ನು ಗುರುತಿಸಿ ಸಂರಕ್ಷಣೆ ಮಾಡಲು ನಿರ್ಧರಿಸಲಾಯಿತು.
ನದಿ ಸಂರಕ್ಷಣಾ ಅಭಿಯಾನದಲ್ಲಿ ತಜ್ಞರಾದ ಪ್ರಸನ್ನ, ಕಾರ್ತಿಕ್, ಡಾ. ದೇವಿ ಪ್ರಸಾದ್, ಡಾ. ಶೆಣೈ, ಪ್ರೊ.ಸ್ಮಿತಾ, ಡಾ. ರೇವತಿ ಉಪಸ್ಥಿತರಿದ್ದರು.





