ಯುವತಿ ನಾಪತ್ತೆ
ಮಂಗಳೂರು, ಅ.6: ನಗರದ ಶಕ್ತಿನಗರದ ಶ್ರೀದುರ್ಗಾ ಕಾಲನಿಯ ನಿವಾಸಿ ಆಶಾಲತಾ (22) ಎಂಬಾಕೆ ಅ.4ರಿಂದ ತನ್ನ ಮನೆಯಿಂದ ನಾಪತ್ತೆಯಾದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.4 ಅಡಿ ಎತ್ತರದ, ಕಪ್ಪುಮೈಬಣ್ಣದ, ಸಪೂರ ಶರೀರದ, ಕೋಲು ಮುಖದ ಈಕೆ ಬಿಳಿ ಮತ್ತು ಗುಲಾಬಿ ಬಣ್ಣದ ಟಾಪ್, ಹಸಿರು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ, ತುಳು ಮಾತನಾಡುವ ಈಕೆಯನ್ನು ಕಂಡವರು ಕಂಕನಾಡಿ ನಗರ ಪೊಲೀಸ್ ಠಾಣೆ (ದೂ.ಸಂ: 0824-2220529, 9480805354) ಅಥವಾ ಮಂಗಳೂರು ನಗರ ಪೊಲೀಸ್ ಕಂಟ್ರೋಲ್ ರೂಮ್ (0824-2220800)ಸಂಪರ್ಕಿಸಲು ಪ್ರಕಟನೆ ತಿಳಿಸಿದೆ
Next Story





