ಲೈಂಗಿಕ ಕ್ರಿಯೆಗೆ ನಿರಾಕರಣೆ: ಬಾಲಕಿಗೆ ಬೆಂಕಿ ಹಚ್ಚಿದ ಮಾಲಕ
ಹೈದರಾಬಾದ್, ಅ.6: ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಮನೆಗೆಲಸದ 13 ವರ್ಷದ ಬಾಲಕಿಗೆ ಮಾಲಕ ಬೆಂಕಿ ಹಚ್ಚಿದ ಘಟನೆ ಕಳೆದ ತಿಂಗಳು ತೆಲಂಗಾಣದಲ್ಲಿ ನಡೆದಿದ್ದು, ಮಂಗಳವಾರ ವರದಿಯಾಗಿದೆ.
ಈ ಘಟನೆ ಹೈದರಾಬಾದ್ನಿಂದ ಸುಮಾರು 195 ಕಿ.ಮೀ. ದೂರದಲ್ಲಿರುವ ಖಮ್ಮಮ್ ಜಿಲ್ಲೆಯಲ್ಲಿ ಸೆಪ್ಟಂಬರ್ 18ರಂದು ನಡೆದಿದೆ. ಪೊಲೀಸರು ಈ ಪ್ರಕರಣದ ಕುರಿತು ತನಿಖೆ ಆರಂಭಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕಿಗೆ ಶೇ. 70 ಸುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈಗ ಬಾಲಕಿ ಗುಣಮುಖಳಾಗುತ್ತಿದ್ದಾಳೆ. ‘‘ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪೊಕ್ಸೋ ಅಡಿಯಲ್ಲಿ ಅತ್ಯಾಚಾರ ಹಾಗೂ ಕೊಲೆ ಯತ್ನದ ಪ್ರಕರಣಗಳನ್ನು ದಾಖಲಿಸಲಾಗಿದೆ’’ ಎಂದು ಖಮ್ಮಮ್ನ ಜಿಲ್ಲಾ ಪೊಲೀಸ್ ಆಯುಕ್ತ ತಫ್ಸೀರ್ ಇಕ್ಬಾಲ್ ತಿಳಿಸಿದ್ದಾರೆ.
Next Story