ಹತ್ರಸ್ ಪ್ರಕರಣ: ದ.ಕ. ಜಿಲ್ಲಾ ಯುವ ಇಂಟಕ್‌ನಿಂದ ಧರಣಿ

ಮಂಗಳೂರು, ಅ.6: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಮಂಗಳವಾರ ನಗರದಲ್ಲಿ ಯುವ ಇಂಟಕ್ ಕಾರ್ಯಕರ್ತರು ಧರಣಿ ನಡೆಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಇಂಟಕ್ ಕಾರ್ಯಕರ್ತರು ಕೇಂದ್ರ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇಂಟಕ್ ಮುಖಂಡರಾದ ಚಿರಂಜೀವಿ ಅಂಚನ್, ವಿಶಾಲ್ ಪೂಜಾರಿ, ಸುನಿತಾ ಡೇಸಾ, ಪುನಿತ್ ಶೆಟ್ಟಿ, ಪದ್ಮಸ್ಮಿತ ಅಧಿಕಾರಿ, ನ್ಯಾಯವಾದಿ ದಿನಕರ ಶೆಟ್ಟಿ, ಶಾಹುಲ್ ಹಮೀದ್, ನವಾಲ್ ಮತ್ತಿತರರು ಪಾಲ್ಗೊಂಡಿದ್ದರು.

Next Story





