ಕೊರೋನದಿಂದ ಶಿಶುಮರಣ ದರದಲ್ಲಿ ಭಾರೀ ಹೆಚ್ಚಳ: ವಿಶ್ವಬ್ಯಾಂಕ್ ಎಚ್ಚರಿಕೆ

Photo: twitter.com/DavidMalpassWBG
ವಾಶಿಂಗ್ಟನ್, ಅ. 6: ಕೊರೋನ ವೈರಸ್ ಸಾಂಕ್ರಾಮಿಕವು ಶಿಶು ಮರಣ ದರವನ್ನು ಈಗಿನ ಪ್ರಮಾಣದ ಅರ್ಧದಷ್ಟು ಹೆಚ್ಚಿಸಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮ್ಯಾಲ್ಪಾಸ್ ಸೋಮವಾರ ಹೇಳಿದ್ದಾರೆ.
‘‘ನಮ್ಮ ಅಂದಾಜಿನ ಪ್ರಕಾರ, ಆರೋಗ್ಯ ಸೇವೆಯ ವೈಫಲ್ಯಗಳಿಂದಾಗಿ ಹಾಗೂ ಆಹಾರದ ಕೊರತೆಯಿಂದಾಗಿ ಶಿಶು ಮರಣ ದರವು 45 ಶೇಕಡದಷ್ಟು ಹೆಚ್ಚುತ್ತದೆ’’ ಎಂದು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ನೀಡಿದ ಆನ್ಲೈನ್ ಸಂದರ್ಶನವೊಂದರಲ್ಲಿ ಅವರು ಹೇಳಿದರು.
ಶಿಶು ಮರಣ ದರದಲ್ಲಿನ ಏರಿಕೆಯು ಮುಂದಿನ ಕೆಲವು ವರ್ಷಗಳವರೆಗೆ ಮುಂದುವರಿಯುತ್ತದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ ಎಂದು ಮ್ಯಾಲ್ಪಾಸ್ ಹೇಳಿದರು.
ಸಾಂಕ್ರಾಮಿಕದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಲೆದೋರಿರುವ ಸಮಸ್ಯೆಗಳಿಂದಾಗಿ ಭವಿಷ್ಯದಲ್ಲಿ ಅಭಿವೃದ್ಧಿಶೀಲ ದೇಶಗಳಲ್ಲಿ ಬೃಹತ್ ಸಮಸ್ಯೆಗಳು ಕಂಡುಬರಬಹುದು ಎಂಬ ಕಳವಳವನ್ನೂ ಅವರು ವ್ಯಕ್ತಪಡಿಸಿದರು.
Next Story