ಉಪ್ಪಿನಂಗಡಿ : ಪಂಚಾಯತ್‍ನವರಿಗೆ ತಲವಾರು ತೋರಿಸಿ ಬೆದರಿಕೆ
ಉಪ್ಪಿನಂಗಡಿ : ಘನ ತ್ಯಾಜ್ಯ ಘಟಕಕ್ಕೆ ಮೀಸಲಿಟ್ಟ ಪಂಚಾಯತ್ ಅಧೀನದ ಭೂಮಿಯ ಪರಿಶೀಲನೆಗೆಂದು ಹೋಗಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತವರ ಸಿಬ್ಬಂದಿಗೆ ಅಪರಿಚಿತ ವ್ಯಕ್ತಿಯೋರ್ವ ಮಾರಾಕಾಯುಧಗಳೊಂದಿಗೆ ಆಗಮಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ಮಂಗಳವಾರ ನಡೆದಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಡ್ ರೋಡ್ರಿಗಸ್ ಮತ್ತು ಪಂಚಾಯತ್ ಸಿಬ್ಬಂದಿ ಇಸಾಕ್ ರವರು ಗುತ್ತಿಗೆದಾರರೊಂದಿಗೆ ಉಪ್ಪಿನಂಗಡಿ ಗ್ರಾಮದ ಅಜಿರಾಳ ಎಂಬಲ್ಲಿ ಪಂಚಾಯತ್ ಘನತ್ಯಾಜ್ಯ ಘಟಕಕ್ಕೆಂದು ಮೀಸಲಿಟ್ಟ 45 ಸೆಂಟ್ಸ್ ಭೂಮಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಸಲು ಪರಿಶೀಲನೆಗೆಂದು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ದ್ವಿ ಚಕ್ರ ವಾಹನದಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತಿ ಮಾರಕಾಯುಧದಿಂದ ಇವರಿಗೆ ಬೆದರಿಸಿ, ಜೀವ ಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story





