ಬುಮ್ರಾ ಮಾರಕ ದಾಳಿ: ರಾಜಸ್ಥಾನದ ವಿರುದ್ಧ ರೋಹಿತ್ ಬಳಗಕ್ಕೆ 57 ರನ್ ಗಳ ಗೆಲುವು
ಅಗ್ರಸ್ಥಾನಕ್ಕೆ ಏರಿದ ಮುಂಬೈ

ಅಬುಧಾಬಿ: ಇಂದು ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು 57 ರನ್ ಗಳ ಗೆಲುವು ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.
ಗೆಲುವಿಗೆ 194 ರನ್ ಗುರಿ ಪಡೆದ ರಾಜಸ್ಥಾನ ರಾಯಲ್ಸ್ 18.1 ಓವರ್ ಗಳಲ್ಲಿ ಕೇವಲ 136 ರನ್ ಗಳಿಸಿ ಆಲೌಟಾಯಿತು. ಜಾಸ್ ಬಟ್ಲರ್ ಏಕಾಂಗಿ ಹೋರಾಟ ಪ್ರದರ್ಶಿಸಿದರು. ಅವರು 44 ಎಸೆತಗಳಲ್ಲಿ 70 ರನ್ ಗಳಿಸಿ ಔಟಾದರು.
ಮುಂಬೈ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತ್ತು.
Next Story





