ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣ: ರಿಕ್ಕಿ ರೈ ಮೊಬೈಲ್ ಎಫ್ಎಸ್ಎಲ್ಗೆ ರವಾನೆ
ಬೆಂಗಳೂರು, ಅ.7: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ವಿಚಾರವಾಗಿ ಮತ್ತಷ್ಟು ಮಾಹಿತಿ ಪಡೆದುಕೊಳ್ಳಲು ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರ ಮೊಬೈಲ್ನ್ನು ಸಿಸಿಬಿ ಪೊಲೀಸರು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ.
ಮಂಗಳವಾರ ರಿಕ್ಕಿ ರೈ ಒಡೆತನದ ಬಿಡದಿ ಮತ್ತು ಬೆಂಗಳೂರಿನ ಮನೆ ಸೇರಿ ವಿವಿಧ ಕಡೆಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದ ತನಿಖಾಧಿಕಾರಿಗಳು, ಬಳಿಕ ಅವರನ್ನು ಕೆಲ ಕಾಲ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ 6ನೆ ಆರೋಪಿ ಆದಿತ್ಯ ಆಳ್ವ ತಲೆಮರೆಸಿಕೊಳ್ಳಲು ರಿಕ್ಕಿ ರೈ ಸಹಕರಿಸಿದ್ದಾನೆಂಬ ಆರೋಪವಿದೆ.
ಈ ವಿಚಾರವಾಗಿಯೇ ಮಂಗಳವಾರ ರಿಕ್ಕಿ ರೈಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ಮಾಡಿ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ. ಜೊತೆಗೆ ರಿಕ್ಕಿ ರೈ ಅವರು ಆದಿತ್ಯ ಆಳ್ವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ, ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ರಿಕ್ಕಿ ರೈ ಮೊಬೈಲ್ನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ. ಮೊಬೈಲ್ ರೀಟ್ರೈವ್ ವರದಿ ಬಂದರೆ ಹೆಚ್ಚಿನ ಮಾಹಿತಿ ತಿಳಿಯಲಿದೆ.