ಹ್ಯಾಪ್‌ಕಾಮ್ಸ್ ಗೆ ಆಯ್ಕೆ

ಉಡುಪಿ, ಅ.7: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ (ಹ್ಯಾಪ್‌ಕಾಮ್ಸ್)ಕ್ಕೆ ಉಡುಪಿ ಕ್ಷೇತ್ರದಿಂದ ಜಯಕುಮಾರ್ ಪರ್ಕಳ ಆಯ್ಕೆ ಯಾಗಿದ್ದಾರೆ.
ಜಯಕುಮಾರ್, ಕಳೆದ 38 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





