ತ್ರಿಪಾಠಿ ಏಕಾಂಗಿ ಹೋರಾಟ: ಚೆನ್ನೈ ಗೆಲುವಿಗೆ 168 ರನ್ ಗುರಿ ನೀಡಿದ ಕೊಲ್ಕತ್ತಾ

ಅಬುಧಾಬಿ: ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಡ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 168 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಡ್ ರೈಡರ್ಸ್ ನಿಗದಿತ 20 ಓವರ್ ಗಳಲ್ಲಿ 167 ರನ್ ಗಳಿಸಿ ಆಲೌಟಾಯಿತು. ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ 51 ಎಸೆತಗಳಲ್ಲಿ 81 ರನ್ ಗಳಿಸಿ ಮಿಂಚಿದರು. ಸುನೀಲ್ ನರೇನ್ 17, ಪ್ಯಾಟ್ ಕಮಿನ್ಸ್ 17 ರನ್ ಗಳಿಸಿದರು.
ಚೆನ್ನೈ ಪರ ಡ್ವೈಯ್ನ್ ಬ್ರಾವೊ 3, ಶಾರ್ದೂಲ್ ಠಾಕೂರ್, ಕರನ್ ಶರ್ಮಾ, ಸ್ಯಾಮ್ ಕುರ್ರನ್ ತಲಾ 2 ವಿಕೆಟ್ ಪಡೆದರು.
Next Story





