ಮಾಸ್ಕ್: 33,100ರೂ. ದಂಡ ವಸೂಲಿ
ಉಡುಪಿ, ಅ.7: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಟ ನಡೆಸುತ್ತಿದ್ದವರಿಂದ ಅ.6ರಂದು 83 ಮಂದಿಯಿಂದ ಒಟ್ಟು 33,100 ರೂ. ದಂಡ ವಸೂಲಿ ಮಾಡಲಾಗಿದೆ.
ನಗರ ಪ್ರದೇಶದಲ್ಲಿ ಮೂವರಿಂದ 700ರೂ., ಪಂಚಾಯತ್ ವ್ಯಾಪ್ತಿಯಲ್ಲಿ ಏಳು ಮಂದಿಯಿಂದ 3500ರೂ. ಪೊಲೀಸ್ ಇಲಾಖೆಯು 57 ಮಂದಿ ಯಿಂದ 27300ರೂ., ಅಬಕಾರಿ ಇಲಾಖೆಯು 9 ಮಂದಿಯಿಂದ 900ರೂ., ಕಂದಾಯ ಇಲಾಖೆಯು 7 ಮಂದಿಯಿಂದ 700ರೂ. ದಂಡ ವಸೂಲಿ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 9013 ಮಂದಿಯಿಂದ 10,28,400ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





