ಗಂಟಲ ದ್ರವ ಮಾದರಿ ನೀಡಲು ನಿರಾಕರಿಸಿದವರಿಗೆ 'ಪಾಸಿಟಿವ್': ಆರೋಪ ಅಲ್ಲಗಳೆದ ಬಿಬಿಎಂಪಿ

ಬೆಂಗಳೂರು, ಅ.7: ಬನಶಂಕರಿ ಮೆಟ್ರೊ ನಿಲ್ದಾಣದ ಬಳಿ ಗಂಟಲ ದ್ರವದ ಮಾದರಿ ನೀಡಲು ನಿರಾಕರಿಸಿದ ಮೂವರಿಗೆ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿ ನೀಡಲಾಗಿದೆ ಎಂಬ ಆರೋಪವನ್ನು ಬಿಬಿಎಂಪಿ ಅಲ್ಲಗಳೆದಿದೆ.
ಬಿಬಿಎಂಪಿ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವಿಲ್ಲ. ಈ ಆರೋಪ ಮಾಡಿರುವವರ ಗಂಟಲ ದ್ರವದ ಮಾದರಿಗಳು ನಮ್ಮ ಬಳಿ ಇವೆ. ಈ ಮೂವರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಒಟಿಪಿಯನ್ನೂ ನೀಡಿದ್ದಾರೆ ಎಂದು ದಕ್ಷಿಣ ವಲಯದ ಜಂಟಿ ಆಯುಕ್ತರು ಸ್ಪಷ್ಟಡಿಸಿದ್ದಾರೆ.
ಬನಶಂಕರಿ ಮೆಟ್ರೊ ನಿಲ್ದಾಣದ ಬಳಿ ನಿತ್ಯ 70ರಿಂದ 80 ಮಂದಿಯ ಗಂಟಲ ದ್ರವದ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೆ 24ರಂದು ಇಲ್ಲಿ 65 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. ಇದರಲ್ಲಿ ಆರೋಪ ಮಾಡಿರುವ ಮೂವರ ಗಂಟಲ ದ್ರವದ ಮಾದರಿಗಳೂ ಸೇರಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





