ಎಐಎಡಿಎಂಕೆಯ ಮುಖ್ಯಮಂತ್ರಿ ಅಭ್ಯರ್ಥಿ ಇ.ಕೆ. ಪಳನಿಸ್ವಾಮಿ

ಚೆನ್ನೈ, ಅ. 7: 2021ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಎಐಎಡಿಎಂಕೆಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಬುಧವಾರ ಬೆಳಗ್ಗೆ ನಡೆದ ಮ್ಯಾರಥಾನ್ ಮಾತುಕತೆ ಬಳಿಕ ಪಕ್ಷದ ಸಂಚಾಲಕ ಒ. ಪನ್ನೀರ್ ಸೆಲ್ವಂ ಅವರು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು.
ಈ ನಿರ್ಧಾರ ಕಳೆದ ಎರಡು ತಿಂಗಳಿಂದ ಪಕ್ಷದ ಒಳಗೆ ಇದ್ದ ಗೊಂದಲಕ್ಕೆ ಪೂರ್ಣ ವಿರಾಮ ಹಾಕಿದಂತಾಗಿದೆ. ಈ ನಡುವೆ 11 ಸದಸ್ಯರ ಚಾಲನಾ ಸಮಿತಿ ರೂಪಿಸಬೇಕೆಂಬ ಪನ್ನೀರ್‌ಸೆಲ್ವಂ ಅವರ ಬೇಡಿಕೆ ಈಡೇರಿದೆ.
ಎಐಎಡಿಎಂಕೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪಳನಿ ಸ್ವಾಮಿ ಅವರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ ಸಮಿತಿ ರೂಪಿಸಿರುವುದನ್ನು ಘೋಷಿಸಿದರು.
Next Story







